ಹರಿದೂ ಹರಿದೂ ಸುಸ್ತಾಗಿ
ನದಿಯೊಂದು
ಹಳ್ಳ-ಕೊಳ್ಳಗಳಲ್ಲಿ ನಿಂತುಬಿಟ್ಟಿರಬಹುದು.
ಸ್ವಲ್ಪವೂ ಬಾಗದೆ ನಿಂತೂ ನಿಂತೂ ದಣಿದು
ಬೆಟ್ಟಗಳು
ಲಾರಿಗಳಲ್ಲಿ ಹತ್ತಿ ಹೊರಟುಹೋಗಿರಬಹುದು.
ಆಕಾಶವ ಹೊತ್ತೂ ಹೊತ್ತೂ ಸೊಂಟನೋವು ಬಂದು
ಮರಗಳು
ಮಿಲ್ಲಿನ ಕಡೆಗೆ ಹೊರಟುಹೋಗಿರಬಹುದು.
ಗಾಳಿಯೇ
ನಿನಗೇಕೆ ಸ್ವಲ್ಪವೂ ದಣಿವಿಲ್ಲ?
ಸ್ವಲ್ಪ ಯೋಚಿಸಿನೋಡು ನಿನ್ನ ಬಗ್ಗೆ
ಒಂದು ನೀರುಬಾಟಲಿಯಷ್ಟೂ ಬೆಲೆಯಿಲ್ಲ ನಿನಗೆ.
ಒಂದು ಬಾಟಲಿಯೊಳಗಾದರೂ ಹೋಗಿ ಕೂರಬಾರದೇ
ವಯಸ್ಸಾದ ಕಾಲದಲ್ಲಿ ?
ಮಲಯಾಳಂ ಮೂಲ- ವಿಷ್ಣು ಪ್ರಸಾದ್
ಕನ್ನಡಕ್ಕೆ- ಕಾಜೂರು ಸತೀಶ್
ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Tuesday, May 10, 2016
ವಾಯು
Subscribe to:
Post Comments (Atom)
-
ಕೊಡಗು ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೂಡಿಗೆಯಲ್ಲಿ ಆಯೋಜಿಸಲಾಗಿತ್ತು. ವಿಚಾರಗೋಷ್ಠಿಯಲ್ಲಿ ಇಬ್ಬರು ವ್ಯಕ್ತಿಗಳು ನನ್ನ ಗಮನ ಸೆಳೆದರು. ಒಬ್ಬರು ನೆ...
-
ರೇಷ್ಮೆ ಇಲಾಖೆಯಲ್ಲಿ ಹತ್ತು ವರ್ಷಗಳ ಕಾಲಮಿತಿ ಬಡ್ತಿಯನ್ನು ಪಡೆದ ವ್ಯಕ್ತಿಗೆ ಪ್ರೊಮೋಷನ್ ನಿರೀಕ್ಷೆ ಇರುತ್ತದೆ . ಅದೇ ವ್ಯಕ್ತಿ ಆ ಹತ್ತು ಮುಗಿದು ಮತ್ತೆ ಮೂರು ವರ್ಷಗಳ...
No comments:
Post a Comment