ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Showing posts with label ಕಡಲ ಕರೆ. Show all posts
Showing posts with label ಕಡಲ ಕರೆ. Show all posts

Friday, August 14, 2020

ಕಡಲ ಕರೆ ಕೃತಿಯ ಕುರಿತು


ವಾಯಿದೆಗಳಿಲ್ಲದೆ ಈ ತಿಂಗಳ ಓದು ಸರ್ರನೆ ಪುಟಗಳು ಪಟಪಟನೆ ಅವಕ್ಕಾವಾಗಿಯೆ ಜಾರಿಕೊಳ್ಳುವಂತೆ ಓದಿನ ಸುದೀರ್ಘ ಸುಖವನ್ನು ಕೊಟ್ಟ ಈ ತಿಂಗಳಲ್ಲಿ ಬಹಳ ಇಷ್ಟವಾದ ಕವಿಯನ್ನು ತೇಗಿಸಿಕೊಂಡ ಒಂದೊಳ್ಳೆ ಸಂಕಲನದ ಬಗ್ಗೆ ಎಷ್ಟು ಮಾತನಾಡಿದರೂ ಸಾಕಾಗದು ,ಕತ್ತಲು ಹೆಪ್ಪುಗಟ್ಟಿದಂತೆ ರಾತ್ರಿಯೆಂಬ ನಾಮಕರಣ ಮಾಡಿ ಕತ್ತಲ ಮಂಪರಿನಲ್ಲೆ ನಿದ್ರೆಗೆ ಜಾರುವ ಹಲವು ಸಂಗತಿಗಳನ್ನು ಯಾವ ಬಗೆಯಲ್ಲಾದರೂ ಸೆರೆ ಹಿಡಿಯಬಹುದೇ ! ಖಂಡಿತ ಹಿಡಿಯಬಹುದೇನೋ, ಕವಿಯೊಬ್ಬ ತನ್ನ ಚೌಕಟ್ಟಿನಲ್ಲಿ ಪೋಟೊಗ್ರಾಪರ್ ಆಗಿ ತನ್ನ ಕೆಲಸವನ್ನು ಕಾದು ಸೆರೆಹಿಡಿದಂತೆ ಬರೆದು ಓದುಗನಿಗೆ ಒಂದು ವಿನ್ಯಾಸವನ್ನು ಕಟ್ಟುಕೊಟ್ಟ ಕವಿತೆಗಳನ್ನು ಓದುವುದೇ ಒಂದು ಅನುಭವ.
*


ರಾಜು ಬಿ.ಜಿ.

Saturday, April 21, 2018

Sunday, July 9, 2017

'ಕಡಲ ಕರೆ'ಯ ಕುರಿತು ಆರ್. ವಿಜಯರಾಘವನ್

ಕೆ ಸಚ್ಚಿದಾನಂದನ್, ರಾಜೀವನ್ ಹೊರತಾಗಿ ಇಲ್ಲಿ ಸೇರಿರುವ ಕವಿಗಳು ಹೊಸಬರು ಎಂಬಂತಿದೆ. ಅವರೆಲ್ಲರ ಕಾವ್ಯದ ಭಾಷೆ ಮತ್ತು ಅಭಿವ್ಯಕ್ತಿ ಪ್ರಕ್ರಿಯೆಗಳು ಭಿನ್ನವಾದವು. ಇವತ್ತಿನ ಅಂದರೆ ಪಕ್ಕಾ ವರ್ತಮಾನದ ಕಾವ್ಯದ ಹಾಗೆ ಕನ್ನಡದ ಓದುಗರಿಗೆ ತೋರುವ ರಚನೆಗಳು ಇವು. ಈ ಬಗೆಯ ಬರೆಹಗಳು ಕನ್ನಡದಲ್ಲಿ ಕಡಿಮೆ. ಹಾಗಾಗಿಯೇ ಎಲ್ಲವೂ ಕನ್ನಡಕ್ಕಿಂತ ಭಿನ್ನವಾಗಿವೆ ಅನ್ನಿಸುತ್ತವೆ. ಇದ್ದರೂ ಯಾವ ಭಾಷೆಯಲ್ಲಾದರೂ ಬರೆಯಬಹುದಾದ ಅರ್ಬೇನ್ ಅನುಭಾವದ ಕವಿತೆಗಳಿವು.


ಈ ಕವಿತೆಗಳನ್ನು ನಿರ್ದಿಷ್ಟ ಹಿನ್ನೆಲೆಯಿಂದ ಗಮನಿಸುವುದು ಸಾಧ್ಯವಾಗಿಲ್ಲ ಏಕೆಂದರೆ ಇವು ಯಾವ ಜಿಯಾಗ್ರಫಿಯ ಹುಟ್ಟುಗಳೆಂಬ ಮಾಹಿತಿಯಿಲ್ಲ. ಕವಿತೆಗಳ ಆಯ್ಕೆಯಲ್ಲಿ ಗಮನಿಸಿದ ಮಾನದಂಡಗಳೇನು ಎನ್ನುವುದೂ ತಿಳಿಯದು. ಆದ್ದರಿಂದ ಇದು ಪ್ಯಾನ್ ಕೇರಳೈಟ್ ಆದ ಅನುಭವವೇ? ಇಡೀ ಕೇರಳದ ಕಾವ್ಯ ಇದೇ ಬಗೆಯ ನರಳುವಿಕೆಯಲ್ಲಿ ತೊಡಗಿಕೊಂಡಿದೆಯೇ? ಸಾಮುದಾಯಿಕ ಅನುಭವ ಗ್ರಹಣವೇ ನಾಪತ್ತೆಯಾಗಿ ಬರೀ ಸ್ವಕೇಂದ್ರಿತ ಅನುಭವಗಳು ಮಾತ್ರವೇ ಕಾವ್ಯವೆಂಬುದಕ್ಕೆ ಸಾಮಗ್ರಿಯಾಗಿ ಒದಗುತ್ತಿದೆಯೇ? ಅಥವಾ ಈ ಹಳಹಳಿಕೆ ಇಡೀ ಮಲಯಾಳಂ ಭಾಷಿಕ ಕವಿಗಳಲ್ಲಿ ವ್ಯಾಪಕವಾಗಿ ಹಬ್ಬಿಕೊಂಡಿದೆಯೇ? ಇಂದಿನ ಅಮೆರಿಕನ್ ಕಾವ್ಯದ ಹಾಗೆ ಎಸೋಟೆರಿಕ್ ಅನ್ನುವುದಕ್ಕೆ ಹಿಂದಿನ ದಶಕಗಳ (ಸಂತೆಗಳಲ್ಲಿ ಕವಿತೆಯೋದುತ್ತಿದ್ದ ಕವಿಯೊಬ್ಬರು ನೆನಪಾಗುತ್ತಾರೆ) ಮಲಯಾಳಂನಲ್ಲಿ ಬಹು ಪ್ರಖ್ಯಾತವಾಗಿದ್ದ ಎಕ್ಸೋಟೆರಿಕ್ ಮಾರ್ಗವು ದಾರಿ ಮಾಡಿಕೊಟ್ಟಿದೆಯೇ? ಇದೊಂದು ಬಗೆಯಲ್ಲಿ ಗಮನವನ್ನು ಅಪೇಕ್ಷಿಸುತ್ತದೆ.

ಇದ್ದರೂ ಕೆಲವು ಕವಿತೆಗಳು ಭಿನ್ನವಾಗಿವೆ. ಪರ್ಷಿಯನ್ ಸೂಫಿಯ ಕಾವ್ಯವನ್ನು ನೆನಪಿಸುವಂತೆ ಒಂದೆರಡಿವೆ; ಒಂದು ಕ್ರೈಸಿಸ್ ಅನ್ನು, ಒಂದು ಹಳವಂಡವನ್ನು ಕುರಿತು ಸಂಯಮದಿಂದ ಹಾಡುವ ಕನಸುಗಳಿವೆ; ಬದುಕಿನ ನಂಬಿಕೆಗಳಿಂದ ಮನುಷ್ಯನನ್ನು ಡಿಲೀಟ್ ಮಾಡಬಹುದೆಂಬ ಕಳವಳದ ಕವಿತೆಯಿದೆ; ಅಳತೆ ಮೀರಿದ ಅಪನಂಬಿಕೆಗಳಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಕಾವ್ಯಾಭ್ಯಾಸಿಗೆ ಭಿನ್ನ ಅನುಭವವನ್ನು ಕೊಡುವ ಕವಿತೆಗಳಿವೆ. ಆದ್ದರಿಂದ ಇದರ ಪ್ರಕಟಣೆ ಅಗತ್ಯವಿದೆ ಎನ್ನಿಸುತ್ತದೆ, ನನಗೆ.
*

-ಆರ್. ವಿಜಯರಾಘವನ್

Saturday, May 20, 2017

'ಕಡಲ ಕರೆ' ಅನುವಾದಿತ ಮಲಯಾಳಂ ಕವಿತೆಗಳ ಕುರಿತು ಡಾ.ಅಶೋಕ್ ಕುಮಾರ್ ಅನಿಸಿಕೆ

​ಪ್ರಿಯ ಸತೀಶ್,

ಇದೀಗ ಕಡಲ ಕರೆ ಕೈಸೇರಿದೆ.​

​ನಿಮ್ಮ ಮುನ್ನುಡಿಯ ಮೇಲೆ ಕಣ್ಣಾಡಿಸಿದೆ. ಬಲು ಆಪ್ತವಾಗಿ ಪ್ರಬುದ್ಧವಾಗಿ ಬರೆದಿದ್ದೀರಿ. ಹಲವು ಅನುವಾದಕರ ಹಲಬಗೆಯ ಅನುವಾದಗಳ ಸುರಿಮಳೆಯಾಗುತ್ತಿರುವ ​​ಈ ಕಾಲದಲ್ಲಿ , ಕವಿತೆಗೆ ಓದುಗರ ಬಾಹುಳ್ಯ ಇಲ್ಲದ ವಾಸ್ತವದಲ್ಲಿ, ಅನೇಕ ಸಹೃದಯ ಕವಿಗಳ( ಎರಡೂ ಭಾಷೆಗಳ) ಸಂಪರ್ಕ,ಸ್ನೇಹ ಬೆಳೆಸಿ ಸಫಲರಾಗಿ, ಕು.ಭಾ.ಭಾ ಪ್ರಾಧಿಕಾರ ಕವಿತೆಯ ಪುಸ್ತಿಕೆ ಹೊರತರುವಂತೆ ಮಾಡಿರುವ ತಮ್ಮ ಸಾಧನೆ ಅಪಾರ. ಅದ್ಭುತ. ಎಲ್ಲ ಪ್ರೋತ್ಸಾಹಕರನ್ನೂ ಮರೆಯದೆ ನೆನೆದು ಬರೆದು ದೊಡ್ಡ ಗುಣ ಮೆರೆದಿದ್ದೀರಿ. ( ದೊಡ್ಡವರನೇಕರು ಮನಃಪೂರ್ವಕ ತಾವು ಮೇಲೇರಿದ ಏಣಿಯನ್ನು ತುಳಿದು ದೂರಾಗಿಸಿ ಮುಸಿನಗುವ ದೃಶ್ಯ ಈಗ ನಿತ್ಯದ ಹಾಡು ).


ಅನುವಾದಕರಿಗೆ ಭಿನ್ನ ವಿಭಿನ್ನ ದೃಷ್ಟಿಕೋನ ಇದ್ದರೂ ಸ್ವಾತಂತ್ರ್ಯ ಕೆಲವೊಮ್ಮೆ ಸಾಧ್ಯವಾದರೂ ಸ್ವೇಚ್ಛೆ ಸರ್ವಥಾ ಸಲ್ಲದು ಎಂಬುದೇ ನನ್ನ ಅಭಿಮತ.
ಅಹಂಕಾರಕ್ಕೂ ಬೊಕ್ಕತನಕ್ಕೂ ಮದ್ದಿಲ್ಲ ಎಂಬ ಗಾದೆಯನ್ನು ನೆನಪಿಗೆ ತರುವಂತಹ ಅನೇಕ ಅನುವಾದಾಪರಾಧಿಗಳು ನಮ್ಮ ನಡುವೆಯೇ ಇರುವುದರಿಂದ ಈ ಮಾತು ನಾ ಹೇಳಬೇಕಾಯಿತು. ತಮ್ಮಂತಹ ವಿನಯಶೀಲರನ್ನು ಕಂಡಾಗ ತಂಗಾಳಿ ತೀಡಿದನುಭವವಾಗುತ್ತಿದೆ.

ಗದ್ಯ, ಪದ್ಯ, ನಾಟಕ, ಲೇಖನ ಇತ್ಯಾದಿ ಅನುವಾದಗಳು ಬಗೆ ಬಗೆಯ ಸವಾಲುಗಳ್ನ್ನು ಒಡ್ಡ ಬಹುದು. ಈ ಕುರಿತು ' ಓದುಗ, ನೋಡುಗ, ಕೇಳುಗ' ಅಥವಾ ರಸಿಕರದೇ ಅಂತಿಮ ನಿರ್ಣಯ ಎಂಬ ಗಿರೀಶ್ ಕಾರ್ನಾಡ್ ರ ನಿಲುವೇ ನನ್ನದೂ ಸಹ.
*


ಡಾ. ಅಶೋಕ್ ಕುಮಾರ್