ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, October 28, 2020

ಪ್ರಿಯತಮ


ಹೆಣ್ಣಿಗೆ ಸದಾ ಒಬ್ಬ ಪ್ರಿಯತಮನಾದರೂ ಇರಬೇಕು
ಮನೆಗೆಲಸದ ಪ್ರಳಯಜಲದೊಳಗೆ
ಮುಳುಗಿ ಸಾಯುತ್ತಿರುವಾಗಲೂ
ನಿನ್ನನ್ನು ಸಾಯಲು ಬಿಡುವುದಿಲ್ಲವೆಂದು
ಹೊರಗೆಳೆದು ಎದೆಗಪ್ಪಿಕೊಳ್ಳಲು
ಮಕ್ಕಳ ಬುತ್ತಿ ಕಟ್ಟಿಡಲಿಲ್ಲ
ಸಮವಸ್ತ್ರ ಇಸ್ತ್ರಿ ಮಾಡಿಡಲಿಲ್ಲ
ಮಧ್ಯಾಹ್ನದ ಊಟ ಇನ್ನೂ ಸಿದ್ಧವಾಗಲಿಲ್ಲ
ಎಂಬಿತ್ಯಾದಿ ತಕರಾರುಗಳ ಉರಿಯಲ್ಲಿ ಕಪ್ಪುಗಟ್ಟುವಾಗ
ನೀನೆಂದೆಂದೂ ಸುಂದರಿಯೇ ಎಂದು ಸಮಾಧಾನಿಸಲು
ಜ್ವರದಿಂದ ನಡುಗುತ್ತಿದ್ದರೂ
ಕಚೇರಿಗೆ ರಜೆಹಾಕಿದ್ದರೂ
ಕೆಲಸ ಮುಗಿಸಿದರಷ್ಟೆ ವಿಶ್ರಮಿಸುವವಳ ಅಸಹಾಯಕತೆಗೆ
ಪ್ರೀತಿಯೇ ಇಲ್ಲದ ತಂಗಾಳಿ ಬೀಸುವಾಗ
ಕುಶಲ ವಿಚಾರಿಸಿ
ಪ್ರೀತಿಯ ಬೆಚ್ಚನೆಯ ಹೊದಿಕೆ ಹಾಸಲು
'ನನ್ನ ಕಂದಾ' ಎಂದು
ಕಲ್ಪನೆಯಲ್ಲಾದರೂ ಮುದ್ದಿಸಲು
*


ಮಲಯಾಳಂ ಮೂಲ - ರಶ್ಮಿ ಎನ್. ಕೆ.

ಕನ್ನಡಕ್ಕೆ- ಕಾಜೂರು ಸತೀಶ್

1 comment:

  1. ಚಂದದ ಪದ್ಯ ಸರ್. ಹೌದು.. ಹೆಣ್ಣಿಗೆ‌ ಸದಾ ಒಬ್ಬ ಪ್ರಿಯತಮನಾದರೂ ಇರಬೇಕು. ಅಟ್ಲೀಸ್ಟ್..ಒಂದು ಮನುಷ್ಯ ಪ್ರಾಣಿಯ ‌ಸ್ನೇಹವಾದರೂ ಇರಲೇಬೇಕು.

    ReplyDelete