ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, April 1, 2016

ದಿನಚರಿ -19

'ಅಸ್ಪೃಶ್ಯತೆ' ಆ ಊರಿನಲ್ಲಿ ಹೇಗಿತ್ತು ಎನ್ನುವುದನ್ನು ಆ ಊರಿನಿಂದ ಹೊರಗೆ ಜೀವಿಸುತ್ತಿರುವ ಹಿರಿಯರೊಬ್ಬರು ಹೇಳುತ್ತಿದ್ದರು. ಅರವತ್ತು-ಎಪ್ಪತ್ತರ ದಶಕದಲ್ಲಿ ಅವರೊಮ್ಮೆ -ಇಡೀ ನಾಡನ್ನೇ ಹಣ ಮತ್ತು ಅಹಂಕಾರಗಳಿಂದ ತಮ್ಮ ಅಂಕೆಯಲ್ಲಿಟ್ಟುಕೊಂಡಿದ್ದ ವರ್ಗಕ್ಕೆ ಸೇರಿದವನೊಬ್ಬನ ಕಾರನ್ನು ಆಸೆಯಿಂದ ಮುಟ್ಟಿಬಿಟ್ಟರಂತೆ. ಆತ ಆ ಕ್ಷಣವೇ ಕಪಾಳಕ್ಕೆ ಬಾರಿಸಿದನಂತೆ. "ಈ ಕಾರು ಇರೋದು ನಿನ್ನಂತವರಿಗೆ ಮುಟ್ಟಲಿಕ್ಕಲ್ಲ" ಎಂದು ತಾನು ಶಿಕ್ಷೆ ಕೊಟ್ಟದ್ದಕ್ಕೆ ಕಾರಣವನ್ನೂ ಕೊಟ್ಟನಂತೆ! ಈಗಲೂ ಆ ನೋವು ನನ್ನಿಂದ ಮಾಸುತ್ತಿಲ್ಲ ಎನ್ನುತ್ತಿದ್ದರು ಅವರು ಭಾವುಕರಾಗಿ.

ಅನ್ಯ ಭಾಷಿಕರನ್ನೇ ಹೀಗೆ ನಡೆಸಿಕೊಳ್ಳುವ ಆ ಊರು, ಇನ್ನು ಜಾತಿ ವ್ಯವಸ್ಥೆ ಸೃಷ್ಟಿಸಿದ 'ತಳವರ್ಗ'ವನ್ನು ಎಷ್ಟು ಭೀಕರವಾಗಿ ನಡೆಸಿಕೊಂಡಿದ್ದಿರಬಹುದು!
*
ಕಾಜೂರು ಸತೀಶ್


No comments:

Post a Comment