ಮರಗಳು ಓದದೆ ಉಳಿಸಿದ
ಎಲೆಗಳನ್ನು
ಮಳೆ ಓದುತ್ತದೆ.
*
ಹುಳುವಿನಷ್ಟು ಚೆನ್ನಾಗಿ
ಹೂವನ್ನು ಬಲ್ಲ
ಯಾವ ಚಿಟ್ಟೆಯೂ ಭೂಮಿಯಲ್ಲಿಲ್ಲ.
*
ಚಿಟ್ಟೆಗಳಿಗಾಗಿ ಕಾದೂ ಕಾದೂ
ದಣಿದ ಹೂದೋಟ
ಹುಡುಕಲು ಹಾರತೊಡಗಿದೆ.
*
ಪ್ರೀತಿಯನ್ನು ತುಂಬಿಕೊಳ್ಳುವ ನರವ್ಯೂಹ
ಅಣೆಕಟ್ಟಿನಂತೆ ಒಡೆಯದಿರಲು
ಈ ಬಾಹುಗಳ ಬಾಗಿಲು ತೆರೆದಿಟ್ಟಿದ್ದೇನೆ.
*
ಕುರ್ಚಿ ಹೇಳುವ ಕತೆಗಳಲ್ಲಿ ಬೇರುಗಳಿರುವುದಿಲ್ಲ
ಆದರೆ ಅವು ಬೇರುಗಳ ನೆನಪಿಟ್ಟುಕೊಳ್ಳುತ್ತವೆ
ಕುರ್ಚಿಯಲ್ಲಿ ಕೂರುವವರ ಒಳಗೆ
ಅವು ಹಬ್ಬಿಕೊಳ್ಳುತ್ತವೆ.
*
ಮಲಯಾಳಂ ಮೂಲ- ಡೋನಾ ಮಯೂರ
ಕನ್ನಡಕ್ಕೆ- ಕಾಜೂರು ಸತೀಶ್
ಎಲೆಗಳನ್ನು
ಮಳೆ ಓದುತ್ತದೆ.
*
ಹುಳುವಿನಷ್ಟು ಚೆನ್ನಾಗಿ
ಹೂವನ್ನು ಬಲ್ಲ
ಯಾವ ಚಿಟ್ಟೆಯೂ ಭೂಮಿಯಲ್ಲಿಲ್ಲ.
*
ಚಿಟ್ಟೆಗಳಿಗಾಗಿ ಕಾದೂ ಕಾದೂ
ದಣಿದ ಹೂದೋಟ
ಹುಡುಕಲು ಹಾರತೊಡಗಿದೆ.
*
ಪ್ರೀತಿಯನ್ನು ತುಂಬಿಕೊಳ್ಳುವ ನರವ್ಯೂಹ
ಅಣೆಕಟ್ಟಿನಂತೆ ಒಡೆಯದಿರಲು
ಈ ಬಾಹುಗಳ ಬಾಗಿಲು ತೆರೆದಿಟ್ಟಿದ್ದೇನೆ.
*
ಕುರ್ಚಿ ಹೇಳುವ ಕತೆಗಳಲ್ಲಿ ಬೇರುಗಳಿರುವುದಿಲ್ಲ
ಆದರೆ ಅವು ಬೇರುಗಳ ನೆನಪಿಟ್ಟುಕೊಳ್ಳುತ್ತವೆ
ಕುರ್ಚಿಯಲ್ಲಿ ಕೂರುವವರ ಒಳಗೆ
ಅವು ಹಬ್ಬಿಕೊಳ್ಳುತ್ತವೆ.
*
ಮಲಯಾಳಂ ಮೂಲ- ಡೋನಾ ಮಯೂರ
ಕನ್ನಡಕ್ಕೆ- ಕಾಜೂರು ಸತೀಶ್
No comments:
Post a Comment