ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, April 27, 2016

ಪ್ರಯಾಣದ ನಂತರ

ಯಾತ್ರೆ ಮುಗಿಸಿ ಮನೆಗೆ ಬಂದು ಅವಳಲ್ಲಿ ಕೇಳಿದ

'ಬಟ್ಟೆಯಂಗಡಿಯಲ್ಲಿ ನೀನು ಸೀರೆ ತಗೋತಿದ್ದಾಗ ಆ ಚೆಲುವ ಸೇಲ್ಸ್ ಮ್ಯಾನ್ ನಿನ್ನ ಕಣ್ಣುಗಳನ್ನೇ ನೋಡ್ತಿದ್ನಲ್ವಾ?'

'ನೀನು ರಸ್ತೆಯಲ್ಲಿ ಹೋಗ್ತಿದ್ದಾಗ ನಿನ್ನ ನೆರಳನ್ನು ತುಳೀತಾ ಹಿಂದೆ ಬರ್ತಿದ್ದವ್ರ್ಯಾರು?'

' ರಸ್ತೆ ಬದಿಯ ಮರದ ನೆರಳಲ್ಲಿ ತಲೆ ಬಗ್ಗಿಸಿ ಏನನ್ನೂ ನೋಡದೆ ನೀನು ನಡೆದು ಬರ್ತಿದ್ದಾಗ ನಿನ್ನೊಳಗೆ ಇದ್ದಿದ್ದಾದ್ರೂ ಏನು?'

ಅವಳು ಉತ್ತರಿಸುವ ಗೋಜಿಗೇ ಹೋಗಲಿಲ್ಲ.

ಅದರ ಬದಲಿಗೆ ತನ್ನ ಆಭರಣಗಳನ್ನು ಕಳಚಿಡುವ ಹಾಗೆ ಒಂದೊಂದೇ ಅಂಗಗಳನ್ನು ಕಳಚಿಟ್ಟಳು.
ಮೊದಲು ಕಣ್ಣು, ಕಿವಿ, ಮೂಗು
ಆಮೇಲೆ ತಲೆ, ಕತ್ತು...

ಎಲ್ಲ ಕಳಚಿ ಹಾಸಿಗೆಯಲ್ಲಿ ಹರಡಿದಳು.

ಅವನು ಅವೆಲ್ಲವನ್ನೂ ಒಂದೊಂದಾಗಿ ತೆಗೆದು ಚೀಲದಲ್ಲಿ ಕಟ್ಟಿ ಅಲಮಾರಿನಲ್ಲಿಟ್ಟು ಬೀಗಹಾಕಿದ.

ಈಗ ಅವಳಿಲ್ಲ.

ಅವನ ಮಾತುಗಳು ವೇದಿಕೆಯಲ್ಲಿ ಮಾರ್ದನಿಸುತ್ತಿವೆ- 'ಫೆಮಿನಿಸಂ.. ಫೆಮಿನಿಸಂ'
*

ಮಲಯಾಳಂ ಮೂಲ- ಪಿ.ಕೆ. ಪಾರಕ್ಕಡವು

ಕನ್ನಡಕ್ಕೆ- ಕಾಜೂರು ಸತೀಶ್


2 comments: