ಬಾಗಿಲು ಮುಚ್ಚಿ ಚಿಲಕ ಹಾಕಿ
ಕವಿತೆ ಬರೆಯಲು ಕುಳಿತೆ.
ಹೊರಗೆ:
ಬೀಸುವ ತಂಗಾಳಿ,
ಹಬ್ಬಿರುವ ತೆಳು ಬೆಳದಿಂಗಳು,
ಮಳೆ ನೆನೆಯುತ್ತಾ ನಿಂತಿರುವ ಒಂದು ಸೈಕಲ್
ಮತ್ತು
ಮನೆಗೆ ಓಡಿಬರುತ್ತಿರುವ ಒಂದು ಮಗು.
ನಾನೊಂದು ಕವಿತೆ ಬರೆದೆ.
ಗಾಳಿಯಿಲ್ಲದ, ಬೆಳದಿಂಗಳಿಲ್ಲದ,
ಸೈಕಲ್ ಇಲ್ಲದ, ಮಗುವಿಲ್ಲದ
ಮತ್ತು
ಬಾಗಿಲೇ ಇಲ್ಲದ ಒಂದು ಕವಿತೆ.
*
ಹಿಂದಿ ಮೂಲ- ಮಂಗಳೇಶ್ ಡಬರಾಲ್
ಕನ್ನಡಕ್ಕೆ- ಕಾಜೂರು ಸತೀಶ್
ಕವಿತೆ ಬರೆಯಲು ಕುಳಿತೆ.
ಹೊರಗೆ:
ಬೀಸುವ ತಂಗಾಳಿ,
ಹಬ್ಬಿರುವ ತೆಳು ಬೆಳದಿಂಗಳು,
ಮಳೆ ನೆನೆಯುತ್ತಾ ನಿಂತಿರುವ ಒಂದು ಸೈಕಲ್
ಮತ್ತು
ಮನೆಗೆ ಓಡಿಬರುತ್ತಿರುವ ಒಂದು ಮಗು.
ನಾನೊಂದು ಕವಿತೆ ಬರೆದೆ.
ಗಾಳಿಯಿಲ್ಲದ, ಬೆಳದಿಂಗಳಿಲ್ಲದ,
ಸೈಕಲ್ ಇಲ್ಲದ, ಮಗುವಿಲ್ಲದ
ಮತ್ತು
ಬಾಗಿಲೇ ಇಲ್ಲದ ಒಂದು ಕವಿತೆ.
*
ಹಿಂದಿ ಮೂಲ- ಮಂಗಳೇಶ್ ಡಬರಾಲ್
ಕನ್ನಡಕ್ಕೆ- ಕಾಜೂರು ಸತೀಶ್
No comments:
Post a Comment