ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, April 18, 2016

ಐಡಿ ಕಾರ್ಡ್

ನಾನಾಗ ವಿದ್ಯಾರ್ಥಿಯಾಗಿದ್ದೆ
ಒಬ್ಬಳು ಹುಡುಗಿ ನನ್ನ ನೋಡಿ ನಕ್ಕಳು.

ಅವಳು ತರುತ್ತಿದ್ದ ಅನ್ನ, ಬಂಗುಡೆ ಮೀನಿನ ಸಾರಿನ ಮೇಲೆ
ನಮ್ಮಿಬ್ಬರ ಕೈಗಳು ಅನ್ನ-ಸಾರಿನಂತೆ ಬೆರೆತವು.

ನಾವಿಬ್ಬರು ಒಂದು ಬೆಂಚಿನಲ್ಲಿ
ಹಿಂದೂ-ಕ್ರಿಶ್ಚಿಯನ್ ಕುಟುಂಬದವರಾದೆವು.

ನಾನು ನೆರೂಡನ ಕವಿತೆಗಳನ್ನು ಓದುತ್ತಾ ಸಾಗಿದೆ
ಆ ನಡುವೆ ನನ್ನ -ಐಡಿ ಕಾರ್ಡ್- ಕಳೆದುಹೋಯಿತು.

ನನ್ನ -ಐಡಿ ಕಾರ್ಡ್- ಕೊಟ್ಟು ಅವಳೆಂದಳು:
ನೀನು ಸ್ಟೈಫಂಡ್ ಪಡೆದ ವಿವರ
ಕೆಂಪು ಶಾಯಿಯಲ್ಲಿ ಬರೆದಿದ್ದಾರಲ್ವಾ ಅದರಲ್ಲಿ.

ಈ ಕಾಲದಲ್ಲಿ ಒಬ್ಬ ಹುಡುಗ, ಒಬ್ಬಳು ಹುಡುಗಿ
ಮರೆತುಬಿಡುವುದನ್ನು ನೋಡಿಲ್ಲ ನಾನು.
ಸ್ವಲ್ಪ ಹೊತ್ತಲ್ಲೇ ಅವರು ಬೇರ್ಪಡುತ್ತಾರೆ.
ಅವರು ಒಂದಾದರೂ ಆಶ್ಚರ್ಯವಿಲ್ಲ ನನಗೆ.
ಅವರ ಐಡಿ ಕಾರ್ಡಿನಲ್ಲಿ
ಕೆಂಪು ಶಾಯಿಯಲ್ಲಿ ಬರೆದ ಅಕ್ಷರಗಳಿರುವುದಿಲ್ಲ.
*

ಮಲಯಾಳಂ ಮೂಲ- ಎಸ್. ಜೋಸೆಫ್

ಕನ್ನಡಕ್ಕೆ- ಕಾಜೂರು ಸತೀಶ್

No comments:

Post a Comment