ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, April 23, 2016

ನಾನು

ನಾನು
ಕಾಡಲ್ಲಿ ಕುಳಿತು,
ಸಮುದ್ರ ತೀರದಲ್ಲಿ ಕುಳಿತು
ಕವಿತೆ ಬರೆಯುತ್ತೇನೆ.

ನೆಲವಿಲ್ಲದವರಿಗೆ,
ಮನೆಯಿಲ್ಲದವರಿಗೆ,
ನನ್ನ ಕಾಡತೊರೆಯ ಬಳಿಬಂದು ನಿಂತವರಿಗೆ,
ನನ್ನ ಶತ್ರುಗಳಿಗೆ,
ಮಿತ್ರರಿಗೆ,
ನನ್ನಂಥ ದುಃಖಿತರಿಗೆ
ಅದನ್ನು ಹಂಚಿಕೊಡುತ್ತೇನೆ.
*

ಮಲಯಾಳಂ ಮೂಲ- ಎ. ಅಯ್ಯಪ್ಪನ್

ಕನ್ನಡಕ್ಕೆ- ಕಾಜೂರು ಸತೀಶ್

No comments:

Post a Comment