ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, April 2, 2016

ದಿನಚರಿ-20

ತೊಂಬತ್ತರ ದಶಕದಲ್ಲಿ ನಾವೆಲ್ಲ ಶಾಲೆಗೆ ಹೋಗುತ್ತಿದ್ದಾಗ - ಮೊದಲು ಹೋದ ಗೆಳೆಯರು ರಸ್ತೆಯಲ್ಲಿ ಲಕ್ಕಿ ಸೊಪ್ಪನ್ನು ಹಾಕುತ್ತಿದ್ದರು. ಒಂದೊಮ್ಮೆ ಬೇಗ ಹೊರಟರೆ ಆ ಕೆಲಸವನ್ನು ನಾವೇ ಮಾಡುತ್ತಿದ್ದೆವು- ಹೋಗಿದ್ದೇವೆಂಬ ಗುರುತಿಗಾಗಿ.
*
ಈ ಊರಿನಲ್ಲಿ ಈಗೀಗ ಜಾತಿ ಆಧಾರದಲ್ಲಿ ಎರಡು ಬಣಗಳಾಗಿ ಒಂದು ಕಲ್ಲಿನ ನೆಪದಲ್ಲಿ ಜನ ಕಿತ್ತಾಡಿಕೊಳ್ಳುತ್ತಿದ್ದಾರೆ. ಆ ಕಲ್ಲಿನ ಜೊತೆ ತಮಗಿದ್ದ ಸಂಬಂಧವನ್ನು ನನ್ನ ಮಾರ್ಗದರ್ಶಕರೊಬ್ಬರು ಈಚೆಗೆ ಹೇಳಿದ್ದರು.
ಅವರೆಲ್ಲ ಅರವತ್ತರ ದಶಕದಲ್ಲಿ ಶಾಲೆಗೆ ಹೋಗುವಾಗ, ಮೊದಲು ಹೋಗುವ ಗೆಳೆಯರ ಗುಂಪಿನಲ್ಲೊಬ್ಬರು ಎತ್ತರವಾಗಿದ್ದ ಆ ಕಲ್ಲಿನ ಒಂದು ಭಾಗಕ್ಕೆ ಮೂತ್ರ ವಿಸರ್ಜನೆ ಮಾಡುತ್ತಿದ್ದರಂತೆ!

ಆದರೆ, ಅದೇ ಕಲ್ಲಿಗೀಗ ಗುಡಿಯ ಕಟ್ಟಿದ ಜನ ತಮ್ತಮ್ಮ ಲಾಭಾಂಶವನ್ನು ಲೆಕ್ಕ ಹಾಕುತ್ತಿದ್ದಾರೆ, ಕಿತ್ತಾಡಿಕೊಳ್ಳುತ್ತಿದ್ದಾರೆ ಎಂದು ವ್ಯಥೆಪಡುತ್ತಿದ್ದರು.
*
- ಕಾಜೂರು ಸತೀಶ್

No comments:

Post a Comment