ನನಗೆ ಈ ವಿದ್ಯುತ್ತಿಲ್ಲದ ರಾತ್ರಿಗಳು ಅಂದ್ರೆ ತುಂಬಾ ಇಷ್ಟ. ಪಡ್ಡೆ ಐಕಳ ಆರ್ಭಟವಿರದ ಆ ಕ್ಷಣಗಳು ದಿವ್ಯ ಮೌನವನ್ನು ಹೆರತೊಡಗುತ್ತವೆ. ನಿಜವಾದ ಚಿಂತನೆಗಳು ಮೊಳೆಯುವ, ಬೆಳೆಯುವ ಸುಸಮಯವದು.
*
ನಿತ್ಯದ ಗಾಯಗಳು ಮತ್ತು ಉಳಿಪೆಟ್ಟುಗಳಷ್ಟೇ ನಮ್ಮನ್ನು ಹೊಸ ಆಕೃತಿಯಲ್ಲಿ ಜಗತ್ತಿಗೆ ತೋರಿಸುತ್ತವೆ. ನಮ್ಮನ್ನು ಬೆಳೆಸುವ ಪರಮ ಗುರುಗಳವು.
*
"ಆತ/ಆಕೆ ಕೆಟ್ಟವನು/ಳು"
ಹೀಗೆ ಗುರುತಿಸಿಕೊಳ್ಳುವ ಜನಗಳ ಜೊತೆಗೆ ನಾನು ಸ್ನೇಹವನ್ನು ಬಯಸುತ್ತೇನೆ. ಆಮೇಲೆ ನನಗನ್ನಿಸುತ್ತದೆ: 'ಈ ಜಗತ್ತಿನಲ್ಲಿ ಕೆಟ್ಟದ್ದು ಅನ್ನೋದು ಏನೂ ಇರಲಾರದು!'
*
ಕಾಜೂರು ಸತೀಶ್

No comments:
Post a Comment