ಆತ್ಮದ ಮೈಪಡೆದವಳೇ,
ಎಲ್ಲೋ ಹೇಗೋ ಇದ್ದೆ ನಾನು- ಮನೆಯಂಗಳದಲ್ಲಿ ಬಿದ್ದ ಎಲೆಯೊಂದರಂತೆ. ಗುಡಿಸಲಿಕ್ಕೆಂದು ಪೊರಕೆ ಹಿಡಿದು ಬಂದ ನೀನು ಎಲೆಯಲ್ಲೇನೋ ಚಿತ್ರ ಕಂಡಂತೆ ಎತ್ತಿ ಮುಡಿಸಿಕೊಂಡೆ. ಹೀಗೆಲ್ಲ ಆಗುತ್ತದೆಂದು ನನಗೂ ತಿಳಿದಿರಲಿಲ್ಲ. ಮರ ಸತ್ತರೂ ಎಷ್ಟೋ ಕಾಲ ಬದುಕಿರುವಂತೆಯೇ ಎದೆಸೆಟೆಸಿ ನಿಂತೇ ಇರುತ್ತದಲ್ಲಾ ಹಕ್ಕಿಗಳಿಗೂ ತಿಳಿಯದಂತೆ - ಹಾಗೆ!
ಮೊದಲ ಸಲ ಗುಂಡಮ್ಮನ ಹಾಗೆ ಬಂದು ಪರಿಚಯ ಹೇಳಿ ಒಂದು ಬಿಳಿ ಹಾಳೆಯನ್ನು ಕೊಟ್ಟು ಹೋದೆ. ಬೂದುಬಣ್ಣದ ಸೀರೆ. ಮೂಗಿಗೆ ಕಿವಿಯ ಓಲೆಯಂಥಾ ಅದೇನೋ ಒಂದು!
ಮತ್ತೊಮ್ಮೆ ಇನ್ನೊಂದಷ್ಟು ಹಾಳೆಗಳನ್ನು ಸಂಗ್ರಹಿಸಲು ಬರುವೆನೆಂದು ಮೇಘಸಂದೇಶ ಕಳಿಸಿದ್ದೆ. ಬಂದು ಒಂದು ತಿಳಿಯಾದ ನಗೆನಕ್ಕು ಅವುಗಳನ್ನು ಸಂಗ್ರಹಿಸಿಕೊಂಡು ಹೊರಟುಹೋಗಿದ್ದೆ. 'ಜಗತ್ತು ಶುಭ್ರವಾಗಿದೆ' ಎಂದು ನನ್ನೊಳಗಿನ ಕಾರ್ಮಿಕ ಅವತ್ತು ಕೂಗಿಹೇಳಿದ್ದ!
ಆ ದಿನದ 'ನೀಲಿ'ಯಲ್ಲಿ ಅದಾವ ಅನಂತತೆಯನ್ನು ಕಂಡುಕೊಂಡೆಯೋ ತಿಳಿಯಲಿಲ್ಲ!
ಯಾವುದನ್ನೂ ಮೈ-ಮನಸ್ಸಿಗೆ ಹಚ್ಚಿಕೊಳ್ಳದೆ ನಿರುಮ್ಮಳವಾಗಿ ಹರಿಯುವ ಅಥವಾ ನಿಲ್ಲುವ ನನ್ನ ನೀರಿನಂಥಾ ಒಡಲಿನ ನಡುವಿಗೆ ನಿನ್ನ ಮುಗ್ಧ ನಿಶ್ವಾಸದಲ್ಲಿ ಅಲೆಗಳ ಸೃಷ್ಟಿಸಿದೆ. ಬೇಡಬೇಡವೆಂದರೂ ಅದೇನೇನೇನೋ ಮೊಗೆಮೊಗೆದು ಕೊಟ್ಟೆ. ತೊಟ್ಟಿಲ ಮಗುವಿನಂತೆ ಹಠಹಿಡಿದೆ, ಫಳಾರನೆ ನಕ್ಕೆ. ಒಂದು ಮಿಠಾಯಿಗೂ ಭೂಮ್ಯಾಕಾಶಗಳ ಅಳೆದು ತೂಗುವವನನ್ನು ಸ್ವೀಕರಿಸುವಷ್ಟರ ಮಟ್ಟಿಗೆ ಕುಟ್ಟಿ, ತಟ್ಟಿ, ಹದಮಾಡಿದೆ!
ಸಂಗೀತವೇ,
ಇಲ್ಲಿ ಯಾವುದೂ ಶಾಶ್ವತವಲ್ಲ; ಯಾವುದೂ! ಈ ಕ್ಷಣಗಳಷ್ಟೇ ಮುಖ್ಯ;ಪವಿತ್ರ. ಹಾಗೆ ನೋಡಿದರೆ ಈ 'ವರ್ತಮಾನ' ಅನ್ನೋದೇ ಇರುವುದಿಲ್ಲ ನೋಡು! ಈಗ ಉಸುರುತ್ತಿರುವ ಈ ದನಿಗಳೆಲ್ಲ ಉಸುರಿದ ಮರುಕ್ಷಣವೇ 'ಭೂತ'ಕ್ಕೆ ಜಾರಿರುತ್ತವೆ. ಈ ಜಗತ್ತು ಭೂತ-ಭವಿಷ್ಯಗಳ ತಿರುಗುಗೂಟಕ್ಕೆ ಸಿಲುಕಿ ನಿನ್ನ ಎರಡೂಕಾಲು ಇಂಚಿನ ಬಳೆಯ ಹಾಗೆ ನಮ್ಮನ್ನೆಲ್ಲ ಗಿರಗಿರ ಸುತ್ತಿಸುತ್ತದೆ! ಯಾರದೋ ಪಾಲಾಗಲಿರುವ ಅಂಗಡಿಯ ಬಳೆ , ಅಂಗಿ, ಪ್ಯಾಂಟು, ಬೆಲ್ಟು, ಇತ್ಯಾದಿ ಇತ್ಯಾದಿಗಳೆಲ್ಲಾ ಎಷ್ಟೆಷ್ಟೋ ಕನಸ್ಸುಗಳನ್ನು ಕಡಪಡೆದು, ಹೆತ್ತು ಮೈಪಡೆದಿರುತ್ತವೆ!
(ಗಾಬರಿಯಾಗ್ಬೇಡ್ರೀ, ನಂಗೆ ಫಿಲಾಸಫಿ ಅಂದ್ರೆ ಇಷ್ಟ! 🤣)
ಇರಲಿ. ಮುರಿದು ಕಟ್ಟಬಹುದಾದ ಈ ಸಾಲುಗಳಂಥಲ್ಲ ಬದುಕು. ನೀ ಹೆತ್ತ ಮಗುವಿನಂಥದ್ದೇ ಮುನಿಸು,ಮಗುವಿನಾಟ ಹೀಗೇ ಮುಂದುವರಿಯಲಿ. ನಾನು ಕಾಲವಾಗುವ ಮುನ್ನವಾದರೂ ಈ ಜಗತ್ತು ನಿನ್ನ ಬಣ್ಣಬಣ್ಣದ ಕನಸಿನ ಕೈಬಳೆಗಳ ತೊಟ್ಟು ಆಟವಾಡಿಕೊಂಡಿರಲಿ. ನನ್ನಿಂದ ನಿನಗೆ ತುಸುವಾದರೂ ಒಳಿತಾಗದಿದ್ದಲ್ಲಿ ನಿನ್ನ ಮುನಿಸು ನನ್ನನ್ನು ಈ ಕ್ಷಣವೇ ಸುಟ್ಟುಬಿಡಲಿ!
✍ ನಿರಾಕಾರಿ

(ಕಾಜೂರು ಸತೀಶ್ )
No comments:
Post a Comment