ಆ ಮನುಷ್ಯ ಈ ಬೆಳಿಗ್ಗೆ ನೆನಪಾದರು.ಅವರಿಂದ ಸಂದೇಶ ಬರದೆ ಮೂರು ತಿಂಗಳಾಗಿದ್ದವು!
'ನಿಮ್ಮ ಓದಿಗೆ' ಎಂಬ ಆರಂಭ ಅವರ ಸಂದೇಶಗಳಿಗೆ. ಪ್ರತಿಕ್ರಿಯಿಸಿದರೆ ಅವರ ಸಂಭ್ರಮ ನೋಡಬೇಕು!
ಫೇಸ್ಬುಕ್ ನಲ್ಲಿ ಅವರನ್ನು ಹುಡುಕಿದೆ. ಜನ ಅವರಿಗೆ ಅಂತಿಮ ನಮನವನ್ನು ಸಲ್ಲಿಸಿ ಮೂರು ತಿಂಗಳು ಕಳೆದಿದ್ದವು!
ಮಾಲಿಂಗರಾಯ ಹೂಗಾರ ಎಂಬ ಈ ಅಪ್ಪಟ ಕಾವ್ಯಪ್ರೇಮಿ ಅನಾರೋಗ್ಯದಿಂದ ತೀರಿಹೋಗಿದ್ದರು! ನನ್ನಂಥ ನೂರಾರು ಜನರೊಂದಿಗೆ ಕವಿತೆಯ ಕಾರಣಕ್ಕಾಗಿ ಪರಿಚಿತರಾಗಿ ಇದ್ದಕ್ಕಿದ್ದ ಹಾಗೆ ಕವಿತೆಯನ್ನೂ ಅದರಂತೆಯೇ ಇರುವ ಅವರ ದೇಹವನ್ನೂ ತೊರೆದುಹೋದ ಆ ಮನುಷ್ಯ ಈ ದಿನವೆಲ್ಲ ನನ್ನನ್ನು ಮತ್ತಷ್ಟೂ ಭಾರವಾಗಿಸಲೆಂಬಂತೆ ಉಳಿದುಹೋಗಿದ್ದಾರೆ.
*
ಕಾಜೂರು ಸತೀಶ್
No comments:
Post a Comment