ನಮ್ಮ ಪಿಂಕುವಿಗೆ ಇಂದು ಒಂದು ವರ್ಷ ತುಂಬುತ್ತೆ
‘ಹ್ಯಾಪಿ ಬರ್ತ್‍ಡೇ’ ಅಂದ್ರೆ ಬಾಲ ಅಲ್ಲಾಡ್ಸುತ್ತೆ.
ಕೇಕು ತಂದು ಕ್ಯಾಂಡಲ್ ಹಚ್ಚಿ ಚಾಕು ಕೊಟ್ಟುಬಿಟ್ಟರೆ
ಕುಂಯ್ಕುಂಯ್ಗುಟ್ಟಿ ಜೊಲ್ಲು ಸುರಿಸಿ ಬಾಲ ಅಲ್ಲಾಡ್ಸುತ್ತೆ.
‘ಹಂಚಿ ಬಾ ತಗೋ’ ಎಂದು ಕೇಕು ಕೊಟ್ಟುಬಿಟ್ಟರೆ
ಮರದ ಕೆಳಗೆ ಎಲ್ಲಾ ತಿಂದು ಮೂತಿ ಒರೆಸಿ ಬರುತ್ತೆ.
‘ಅಯ್ಯೋ ಪೆದ್ದು ಹೀಗೇಕ್ಮಾಡ್ದೆ’ ಎಂದು ಕೇಳಿಬಿಟ್ಟರೆ
ಕಿವಿ ಬಾಗ್ಸಿ ಶರಣೆಂದು ಮುದುರಿ ಮಲ್ಕೊಳ್ಳುತ್ತೆ.
*
ಕಾಜೂರು ಸತೀಶ್

No comments:
Post a Comment