ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Tuesday, January 30, 2018

ಎಲೆ

ಎಲೆ
ಉದುರಿ ಪತಿಯ ಕಿರುಬೆರಳನೂ ಬಿಡಿಸಿಕೊಂಡಂತೆ
ತವರ ನೆನೆನೆನೆದು ಗಾಳಿಯಲ್ಲದೆಷ್ಟು ಸಲ ಕುಣಿವಳು!

ಕಾಲುಂಗುರವಿರುವ ಬೆರಳ ತುದಿ ಸ್ಪರ್ಶಿಸಲು ತವರ
ಮಣ್ಣು, ಬೇರು, ಕಾಂಡ, ಕೊಂಬೆಯ ತುತ್ತ ತುದಿ
ಹಸಿರು
ಮತ್ತೆ ಮತ್ತೆ ಹಸಿರು
ಮತ್ತೆ ಮತ್ತೆ ಬೆಳಕು!
*

ಕಾಜೂರು ಸತೀಶ್

No comments:

Post a Comment