ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, January 11, 2018

ವ್ಯವಸ್ಥೆ

'ತೆಂಗಿನ ಮರ'ದ ಬಗ್ಗೆ ಎಷ್ಟು ಹೇಳಿದರೂ ಶಿಷ್ಯಂದಿರಿಗೆ ಅರ್ಥವಾಗುತ್ತಿರಲಿಲ್ಲ.

'ಗುರುಗಳಿಗೆ ತರಬೇತಿ ಕೊಡುವುದೊಂದೇ ಇದಕ್ಕೆ ಪರಿಹಾರ' ಎಂದರು ಶಿಕ್ಷಣ ತಜ್ಞರು.

ಒಂದು ತಿಂಗಳ ತರಬೇತಿ. ಪಕ್ಕದ ಊರಿನ ಮಹಾಗುರುಗಳಿಂದ ತರಬೇತಿಯನ್ನು ಕೊಡಿಸಲಾಯಿತು.

ಮಹಾಗುರುಗಳು "ಹಸುವಿನ ಕುರಿತು ನಿಮಗೇನೇನು ತಿಳಿದಿದೆಯೋ ಪಟ್ಟಿ ಮಾಡಿ" ಎಂದು ನಿತ್ಯ ಪಟ್ಟಿ ಮಾಡಿಸತೊಡಗಿದರು.

ಗುರುವಿಗೆ ಬೇಜಾರಾದಾಗ ಮಹಾಗುರುಗಳು, 'ಇಟ್ಟರೆ ಸೆಗಣಿಯಾದೆ..' ಎಂದು ಜೋರಾಗಿ ಹಾಡುತ್ತಾ, ಇಷ್ಟೆತ್ತರ ಕಾಲೆತ್ತಿ ಕುಣಿಯುವುದನ್ನು ಹೇಳಿಕೊಟ್ಟರು.

ತರಬೇತಿಯ ಕಡೆಯ ದಿನದ ಕಡೆಯ ಕ್ಷಣದಲ್ಲಿ 'ಹಸುವನ್ನು ತೆಂಗಿನ ಮರಕ್ಕೆ ಕಟ್ಟಬಹುದು' ಎಂಬ ವಿಷಯವನ್ನು ಹೇಳಿಕೊಟ್ಟರು.

ಆ ಒಂದು ತಿಂಗಳಲ್ಲಿ ಗುರುವಿಗೂ 'ತೆಂಗಿನ ಮರ' ಹೇಗಿರುತ್ತದೆ , ಏನು ಕೊಡುತ್ತದೆ ಅನ್ನೋದೆಲ್ಲ ಮರೆತುಹೋಗಿತ್ತು.

ಹಿಂತಿರುಗಿ ಬಂದ ಗುರು ಶಿಷ್ಯಂದಿರೊಂದಿಗೆ ಮರಕೋತಿ ಆಟ ಆಡಲು ತೊಡಗಿದರು!
*

ಕಾಜೂರು ಸತೀಶ್

No comments:

Post a Comment