ಆತ್ಮೀಯ ಸಿದ್ದು ಸತ್ಯಣ್ಣವರ ಅವರ ಮೊದಲ ಕವನ ಸಂಕಲನ 'ಕನಸ ಬೆನ್ನತ್ತಿ ನಡಿಗೆ' ಈಚೆಗೆ 'ಅಭಿನವ' ಪ್ರಕಾಶನದಿಂದ ಬೆಳಕು ಕಂಡಿತು. 'ಹೊಲ, ಅಪ್ಪ ಮತ್ತು ನಾನು'(ಪ್ರಬಂಧ), 'ಮಹಾನದಿಯ ಅರಿವಿನಗುಂಟ'(ಛತ್ತೀಸ್ಗಡ್ ಪ್ರವಾಸ ಕಥನ) ಇವರ ಪ್ರಕಟಿತ ಕೃತಿಗಳು.
'ಕನಸ ಬೆನ್ನತ್ತಿ ನಡಿಗೆ' ಕೃತಿಗೆ 2015ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಿ. ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ ಲಭಿಸಿದೆ.
ದಟ್ಟ ಜೀವನ ಪ್ರೀತಿ, ಅಸಹನೆ ಮತ್ತು ಆಕ್ರೋಶಗಳನ್ನು ಗರ್ಭೀಕರಿಸಿಕೊಂಡ ಕವಿತೆಗಳಿವು. ಮೊದಲ ಸಂಕಲನದ ಸಹಜ ಅಬ್ಬರ ಮೊದಮೊದಲ ಕವಿತೆಗಳಲ್ಲಿ ಕಾಣಿಸಿಕೊಂಡರೂ, ಕವಿತೆಯ ಮೇಲಿನ ಅಧ್ಯಯನದ ಹಸಿವು ಅವರಿಗಿರುವುದು ಸುಸ್ಪಷ್ಟ ; ಅತೃಪ್ತಿಯೂ ಕೂಡ. ಹಾಗಾಗಿ, ಭರವಸೆ ಮೂಡಿಸುವ ಕವಿತೆಗಳನ್ನು ಇವರು ಹೆರಬಲ್ಲರು:
ಒಂದು ತಪ್ಪು ಸಂದೇಶ
ಅಥವಾ ಗೊಂದಲ
ಸಾವಿರ ಅನಾಹುತಗಳಿಗೆ ರಹದಾರಿ
ಹಾಗಾಗಿ
ನಾನು ಕವಿತೆಗಳ ತಿದ್ದುತ್ತೇನೆ ಮತ್ತೆ ಮತ್ತೆ
( ಕವಿತೆ ಮತ್ತು ನಾನು)
ಜಾಗವಿಲ್ಲದೆ ನಾವೇ ಸಾಯುವ ದಿನಗಳಲಿ
ದಟ್ಟಡವಿ, ಮೇರು ಪರ್ವತದ ಮೇಲೆ
ಬಾವುಟ ನೆಡುವ ಕನಸು
(ಹೃದಯ ಒಂದು ಮುಷ್ಠಿ,ಜೀವ ಹಿಡಿ ಗಾತ್ರ)
ವಾಮನನ ಹೆಜ್ಜೆ ಇಟ್ಟರು ತಲೆ ಮೇಲೆ
ಫೀನಿಕ್ಸ್ ಹಕ್ಕಿ ಕಂಡಿತು ಮೇಲೆ
(ನಮ್ಮ ಶಕ್ತಿ)
ಕಜ್ಜಿಭೂಮಿಯ ಬಯಲ ಶರೀರದಲಿ
ಸೇಬುಗಳ ಸಮಾನ ಹಂಚಿಕೆ
ನನ್ನ ಪಾಲಿಗಾಗಿ ಸರದಿಯಲಿ ನಿಂತು ಕಾಯುತ್ತಿರುವೆ
(ಕಾಯುತ್ತಿರುವೆ)
ಕತ್ತಲೆ ಕುರುಡು, ತಪ್ಪು ಮಾಡದು
(ಕತ್ತಲೆಯ ಕವಿತೆ)
ಅಳು ಹಸಿವು, ನಗು ಉಪವಾಸ
(ನಿರುತ್ತರ)
ಹುಟ್ಟು ಹುಲ್ಲಾದರೆ ಸಾವು ಬೆಂಕಿ
(ಹರಿವು)
*
ಕಾಜೂರು ಸತೀಶ್

No comments:
Post a Comment