ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, January 10, 2018

ಕ್ರಿಸ್ತಪೂರ್ವದೆಡೆಗೆ

'ನಾಡಿದ್ದು ಬೆಳಿಗ್ಗೆ ಕಳಿಸ್ತೇನೆ' ಮಾತುಕೊಟ್ಟಿದ್ದೆ.

ಟೈಪಿಸಿಯಾದ ಮೇಲೆ ಕಡತವು13kb ತೂಗುತ್ತಿತ್ತು. ಬೆಳ್ಳಂಬೆಳಿಗ್ಗೆ . Send ಗುಂಡಿಯನ್ನು ಅದುಮಿದೆ.

ದಿನವಿಡೀ DATA ಕಣ್ತೆರೆದೇ ಇರುವಂತೆ ನೋಡಿಕೊಂಡೆ.

ಹಾಗೆ ಆ ದಿನವೂ ಕಣ್ಮುಚ್ಚಿತು. ನನ್ನ ಉಸಿರಿನಷ್ಟೇ ತೂಕವಿದ್ದ ಆ ಕಡತವು ಭೂಮಿಯ ಜೊತೆಗೆ ತಿರುಗುತ್ತಲೇ ಇತ್ತು!

ಮರುದಿನವಿಡೀ ಇದೇ 'ಇದರ' ಪುನರಾವರ್ತನೆ!

ನನ್ನ ಬಿಟ್ಟುಹೋಗುವ ಯಾವ ಇರಾದೆಯೂ ಅದಕ್ಕಿರಲಿಲ್ಲ.

ಮೂರನೇ ದಿನದ ಪ್ರಯತ್ನದಲ್ಲಿ ಯಶಸ್ವಿಯಾದೆ. ಅಷ್ಟರಲ್ಲಾಗಲೇ ವಚನಭ್ರಷ್ಟನಾಗಿದ್ದೆ.

ಟವರ್ ಕೆಳಗೆ ನಿಂತರೂ ಸಿಗ್ನಲ್ಲು ಸಿಗದ 'ಕರಿಕೆ'ಯ ಬಿಎಸ್ಎನ್ಎಲ್ಲಿಗೆ ನಮನ!
RIP!
*
ಕಾಜೂರು ಸತೀಶ್

No comments:

Post a Comment