ಆ ಶಾಲೆಗೆ ಹೋಗಿದ್ದೆ. ಏಕೋಪಾಧ್ಯಾಯ ಶಾಲೆ. ಚಿಕ್ಕಾಸಿಗೂ ಪ್ರಯೋಜನವಿರದ ಯೋಜನೆಯೊಂದನ್ನು ಅನುಷ್ಠಾನಗೊಳಿಸಬೇಕಿತ್ತು.
ಮಕ್ಕಳ ಹೆಸರನ್ನು ಇಂಗ್ಲಿಷಿನಲ್ಲಿ ಬರೆದಿಟ್ಟಿರಬೇಕಿತ್ತು. ಹಾಗೆ, ಬೆರಳೆಣಿಕೆಯಷ್ಟೇ ಇರುವ ಮಕ್ಕಳ ಹೆಸರುಗಳನ್ನು ಆ ಮೇಷ್ಟ್ರು ಬರೆದುಕೊಟ್ಟರು. ಆ ಹೆಸರುಗಳನ್ನು ನೋಡಿ ಬೆಚ್ಚಿಹೋದೆ. ಬಹುತೇಕ ಹೆಸರುಗಳು 'ಕೋಮಾ' ಹಂತದಲ್ಲಿದ್ದವು! ಉದಾಹರಣೆಗೆ - RMSHA, SHIPPA( ರಮೇಶ, ಶಿಲ್ಪ ಎಂಬ ಹೆಸರುಗಳು ಹೀಗೆ ರೂಪಾಂತರ ಹೊಂದಿದ್ದವು!)
'ಇದೇನು ಸಾರ್, ಇಂಥಾ ಹೆಸರುಗಳು'? ಇರುವ ಹಾಗೆ ಓದಿ ಅವರನ್ನು ಕೇಳಿದೆ. ತುಂಬಾ ಚೆನ್ನಾಗಿ ಉತ್ತರಿಸಿದರು: 'ಅವರು ಕೂಲಿ ಕಾರ್ಮಿಕರ ಮಕ್ಕಳು. ಅವರ ಪೋಷಕರಿಗೆ ಮಕ್ಕಳ ಹೆಸರೂ ಹೇಳಲೂ ಬರೋದಿಲ್ಲ. ಅವರು ಹೇಳಿದ ಹಾಗೆ ಬರೆದುಕೊಂಡೆ!'
ವೃತ್ತಿನಿರತ ಶಿಕ್ಷಕರ ಗುಣಮಟ್ಟವನ್ನು ಪರೀಕ್ಷಿಸದ, ನಿವೃತ್ತಿಯ ವಯಸ್ಸನ್ನು ಏರಿಸುತ್ತಲೇ ಇರುವ ವ್ಯವಸ್ಥೆಯ ಬಗ್ಗೆ ಸಹಿಸಲಸಾಧ್ಯವಾದಷ್ಟು ಸಿಟ್ಟು ಬಂತು.
ಆ ದಿನದ ನನ್ನ ಏಕಾಂತವೂ ಹಾಳಾಗಿ ಹೋಯಿತು.
**
-ಕಾಜೂರು ಸತೀಶ್

No comments:
Post a Comment