ಗುಂಡಿ-೧
----------
ಹಾವುಗಳ ಹಾವಳಿ ಹೆಚ್ಚಾಗಿ ಕಪ್ಪೆಗಳು ರಸ್ತೆಯ ಚಿಕ್ಕ ಗುಂಡಿಗಳಲ್ಲಿ ಮನೆಮಾಡಿದ್ದರಿಂದ ಚಕ್ರಕ್ಕೆ ಸಿಲುಕಿ ಅವುಗಳ ಸಂತತಿ ವಿನಾಶದತ್ತ ಸಾಗಿತು. ಕಡೆಗೆ ರಸ್ತೆಯ ದೊಡ್ಡ ಗುಂಡಿಗಳಲ್ಲಿ ಮನೆಮಾಡಿದವು.
ನಾಯಕ ಕಪ್ಪೆ ಹೇಳಿತು- 'ಈಗ ಸತ್ತರೆ ನಾವಷ್ಟೇ ಸಾಯುವುದಿಲ್ಲ!'
*
ಗುಂಡಿ-೨
----------
ರಸ್ತೆಯ ದೊಡ್ಡ ಗುಂಡಿಗಳು ಆಶ್ರಯ ನೀಡಿದ ಖುಷಿಗೆ ಕಪ್ಪೆಗಳೆಲ್ಲಾ ಸೇರಿ 'ಗೆಲ್ಲಿಸಿದವರಿಗೆ' ಸನ್ಮಾನ ಸಮಾರಂಭವನ್ನು ಏರ್ಪಡಿಸಿದವು.
*
ಕಾಜೂರು ಸತೀಶ್
No comments:
Post a Comment