ಆಡಂಬರದ ಅಮಲಲ್ಲಿ ತೇಲುತ್ತಿರುವ ಕಾಲದಲ್ಲಿ ಈ ಇಬ್ಬರು ದೇಹದಾನ/ನೇತ್ರದಾನ ಮಾಡುವ ನಿರ್ಣಯದೊಂದಿಗೆ ತಮ್ಮ ಮದುವೆಯನ್ನು 'ಆಚರಿಸಿ'ಕೊಂಡರು! ಜೊತೆಗೆ ಕವನಸಂಕಲನದ ಬಿಡುಗಡೆ, ಪರಿಸರ ಸ್ನೇಹಿ ಪದಾರ್ಥಗಳ ಬಳಕೆ.
ಕಿರಗಂದೂರಿನ ಗೌತಮ್ ಮತ್ತು ಸುಮನ ಅರಕಲಗೂಡು ಅವರ ಕುರಿತ ಮಾತಿದು. ಈ ಇಬ್ಬರ ಜೀವಪರ ಕಾಳಜಿ ಮತ್ತು ಅದರ ಅನುಪಾಲನೆ ನನ್ನನ್ನು ಕಾಡಿತು.
ಸುಮನ ಅರಕಲಗೂಡು ಅವರ ಪರಿಣಯ
ಸಂಕಲನಕ್ಕೆ (ದಿನೇಶ್ ಅವರು ನೀಡಿದ್ದು) ತೆರೆದುಕೊಂಡೆ. ಪ್ರೀತಿಯಿಂದ ಗೆಲ್ಲಲಾಗದ್ದು ಪ್ರಪಂಚದಲ್ಲಿ ಯಾವುದೂ ಇಲ್ಲ ಎನ್ನುವ ನಿಲುವಿನವರು ಸುಮನಾ. ಮತ್ತಷ್ಟೂ ಓದಿಕೊಂಡಲ್ಲಿ ಇವರ ಕಾವ್ಯಕ್ರಮ ಮಾಗಬಲ್ಲದು.
ಗೌತಮ್-ಸುಮನ , ಅಭಿನಂದನೆಗಳು ಈ ಸಂಚಲನಕ್ಕಾಗಿ.
*
- ಕಾಜೂರು ಸತೀಶ್
ಮಾದರಿ ನಿರ್ಣಯ
ReplyDelete