ರಸ್ತೆಯಲ್ಲಿ ಅನಾಥ ಶವವೊಂದಿತ್ತು. ಅಲ್ಲಿದ್ದವರ್ಯಾರಿಗೂ ಅದರ ಗುರುತು ಹತ್ತಲಿಲ್ಲ.
ಎಡಗೈ ಗುರುತಿನ ಪಕ್ಷದವರು ಫೋಟೋ ತೆಗೆದು ತಮ್ಮ ಪಕ್ಷದ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡು 'ಇವರು ಗೊತ್ತಾ? ನಮ್ಮ ಪಕ್ಷದವರಾ?'ಎಂಬ ಪ್ರಶ್ನೆ ಎಸೆದರು.
ಬಲಗೈ ಗುರುತಿನ ಪಕ್ಷದವರೂ ಹಾಗೇ ಮಾಡಿದರು.
ಯಾರೂ ಗುರುತಿಸಲಿಲ್ಲ . ಕೊನೆಗೆ ಜಾತಿಗೊಂದರಂತೆ ರಚಿಸಲಾಗಿದ್ದ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಲಾಯಿತು- 'ನಮ್ಮವರಾ?'
ಆಗಲೂ ಯಾರಿಗೂ ಗುರುತು ಸಿಗಲಿಲ್ಲ.
ಅಷ್ಟೇ!
*
✍️ ಕಾಜೂರು ಸತೀಶ್
No comments:
Post a Comment