ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, January 22, 2015

ಭಯ

ಚಿಕ್ಕವನಿದ್ದಾಗ
ಗೂಬೆ ಕೂಗುವ ದನಿ ಕೇಳಿದಾಗಲೆಲ್ಲ
ಹೆದರಿ ಅಮ್ಮನ ಸೀರೆಯ ಸೆರಗಿನ ಹಿಂದೆ
ಅಡಗಿಕೊಳ್ಳುತ್ತಿದ್ದೆ.



ಈಗ
ಥರಗುಟ್ಟುವ ಮಾಗಿಯ ಚಂದ್ರ
ಮೋಡಗಳ ನಡುವೆ ಕುಳಿತು ಊಳಿಡುತ್ತಿದೆ.







ಸಾವಿನ ಹಿಂದೆ
ಅಡಗಿಕೊಂಡ ಅಮ್ಮ
ಬಾಲ್ಯದ ಮೋಡಗಳ ಹಿಂದೆ
ಅಡಗಿ ಇಣುಕುತ್ತಿದ್ದಾಳೆ.
ಚಂದ್ರನ ಕಣ್ಣಿನ ಮಾಗಿದ ಬೆಳಕು
ಅವಳ ಮೇಲೆ .



ನನಗೀಗ ಸಾವಿನ ಭಯವಿಲ್ಲ .

**

ಮಲಯಾಳಂ ಮೂಲ- ಕೆ.ಸಚ್ಚಿದಾನಂದನ್


ಕನ್ನಡಕ್ಕೆ -ಕಾಜೂರು ಸತೀಶ್

No comments:

Post a Comment