ಮತ್ತೆ ಅಂಥದ್ದೇ ಹಕ್ಕಿ ನನ್ನನ್ನು ಕಾಡಿಸಬೇಕು ಎಂಬಂತೆ ಸತ್ತು ಬಿದ್ದಿತ್ತು !
ಒಂದು ದಿನ ಶೂನ್ಯವನ್ನು ದಿಟ್ಟಿಸಿ ಅದರೊಳಗಿರಬಹುದಾದ ಕೇಂದ್ರ , ವ್ಯಾಸ, ತ್ರಿಜ್ಯ ,ಜ್ಯಾ,ವೃತ್ತಖಂಡ,ತ್ರಿಜ್ಯಾಂತರಖಂಡಗಳನ್ನೆಲ್ಲ ಊಹಿಸಿ , ಜ್ಯಾಮಿತಿಯ ಒಳಗೂ ಇರುವ aesthetic senseನ್ನು ಅನುಭವಿಸುತ್ತಾ ಕುಳಿತಿದ್ದಾಗ, ಆ ಹಕ್ಕಿ ಹಾರಿಬಂದು ನೆಟ್ಟಗೆ ನೆಟ್ಟಿದ್ದ ಕಂಬವೊಂದಕ್ಕೆ ಢಿಕ್ಕಿಯೊಡೆದು ನೆಲಕ್ಕೆ ಬಿದ್ದುಬಿಟ್ಟಿತ್ತು ! ಎತ್ತಿಕೊಂಡರೆ ನನ್ನ ಉಸಿರಿನ ಸದ್ದಷ್ಟೇ ಕೇಳಿಸುತ್ತಿತ್ತು!
ಮೊನ್ನೆ ,ನಮ್ಮ ಮಕ್ಕಳು ಗುಂಪು ಕಟ್ಟಿಕೊಂಡು ಅಂಥದ್ದೇ ಹಕ್ಕಿಯನ್ನು ನಾಲ್ಕನೆಯ ಬಾರಿಗೆ ತಂದು ಕೈಗೊಪ್ಪಿಸಿದಾಗ ,'ಇದ್ಯಾಕಪ್ಪಾ ಈ ಪಕ್ಷಿ ಹೀಗೇ ಸಾಯುತ್ತೆ' ಎಂದು ಲೆಕ್ಕ ಹಾಕುತ್ತಾ ಕೂತಿದ್ದೆ.
ಅದನ್ನು ಕೈಯಲ್ಲಿ ಹಿಡಿದಾಗಲೂ,ಇಳಿಸಿದ ಮೇಲೂ, ನನ್ನ ಉಸಿರಿನ ಸದ್ದಷ್ಟೇ ಕೇಳಿಸುತ್ತಿದೆ!!
**
-ಕಾಜೂರು ಸತೀಶ್

No comments:
Post a Comment