ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Wednesday, January 14, 2015

ಜಲಸಮಾಧಿ

ತಾವರೆಯನ್ನೇ ನೋಡಿರದಿದ್ದ ಕಾಲದಲ್ಲಿ
ಮೊದಲ ಬಾರಿಗೆ
ತಾವರೆಯ ಚಿತ್ರ ಬರೆದೆ.



ಗದ್ದೆಯಲ್ಲಿ
ಒಂದು ಬಾತುಕೋಳಿ,
ಒಂದು ಹಂಸವೂ ಸುಳಿಯದ ಕಾಲದಲ್ಲಿ
ತಾವರೆಯ ಜೊತೆಗೆ
ಹಂಸವೊಂದರ ಚಿತ್ರ ಬರೆದೆ.



ಅದಾದ ಮೇಲೆ
ಹಂಸಗಳನ್ನೂ,
ತಾವರೆಗಳನ್ನೂ
ತುಂಬಿಕೊಂಡ ಕೊಳವೊಂದನ್ನು
ನೋಡುತ್ತಲೇ ಇದ್ದೇನೆ .



ಕಡಲನ್ನು ನೋಡಿರದಿದ್ದರೂ
ಆಳಸಮುದ್ರದ ನೀಲಿಯನ್ನೂ,
ಅಲೆಗಳ ಸಾಲುಗಳಲ್ಲಿ
ಜೋಕಾಲಿಯಾಡುವ ನನ್ನನ್ನೂ
ಬಿಡಿಸಿದೆ.



ಆಮೇಲೆ
ಹಂಸ,
ಕೊಳ,
ಸಮುದ್ರ ,
ಆಕಾಶದಿಂದಾಚೆಗೆ
ಹಾರಿಹೋದವು.



ನನ್ನ ಕ್ಯಾನ್ವಾಸಿನ ಸ್ಪಷ್ಪ ಗೆರೆಗಳ ತುಂಬ
ಚಿಮ್ಮುವ ತಾವರೆಗಳು
ಕೆಂಪು ,ನೀಲಿಗಳಿಂದ ಕೂಡಿದ
ಉಕ್ಕೇರುವ ಚಿತ್ರದ ಕೊಳಗಳು.




ಆಳ ತಿಳಿದ ಕೋಣದ ಹಾಗೆ
ಕೆಸರುಗೊಳದಲ್ಲಿ ಮುಳುಗೆದ್ದೆ.
ಕಿವಿಗಳ ಸುತ್ತ ಗುಂಯ್ಗುಡುವ
ಕೀಟಗಳ ಓಡಿಸಿದೆ.
ಬೆನ್ನ ಮೇಲಿನ ಕೊಕ್ಕರೆಗಳ ಓಡಿಸಿದೆ .
ಕೊಳದೊಳಗೇ ಸಮಾಧಿಯಾದೆ.



ಕಾಲ ತಪ್ಪಿ
ಅದರೊಳಗೆ ಅರಳಿತೊಂದು
ಬಿಳಿಯ ತಾವರೆ!

**

ಮಲಯಾಳಂ ಮೂಲ- ಬಿಂದು ಒ.ಎನ್.

ಕನ್ನಡಕ್ಕೆ - ಕಾಜೂರು ಸತೀಶ್

No comments:

Post a Comment