ಮಂಜುಳಾ ಹುಲಿಕುಂಟೆ ಅವರ ದೀಪದುಳುವಿನ ಕಾತರ ಕವನ ಸಂಕಲನವನ್ನು ಈ ಬೆಳಿಗ್ಗೆ ಓದಿದೆ. ಮುಗ್ಧ ಹುಡುಗಿಯೊಬ್ಬಳ ಪ್ರೇಮದ ಕುರಿತ ಭಾಷ್ಯ, ಲೋಕ ಗ್ರಹಿಕೆ, ದಿನಚರಿ, ಆತ್ಮಕಥಾನಕಗಳಿವು. ಪ್ರೇಮ-ವಿರಹ, ಹತಾಶೆ-ಜೀವಂತಿಕೆಗಳ ಮಿಶ್ರಣ,
'ಮುಟ್ಟದೆಯೇ ಮುತ್ತಿಡುವ ಮೋಹಕತೆ'
ಹಾಡಿಕೊಳ್ಳಲು ಬಿಟ್ಟುಬಿಡಿ
ನನ್ನ ಪಾಲಿನ ಹಾಡುಗಳ
*
ಹಚ್ಚಿಟ್ಟ ಹಣತೆಯಲ್ಲಿ
ನನ್ನ ನಾನೇ ಸುಟ್ಟುಕೊಳ್ಳುವಾಗ
ಬೆಳಕೆಂದು ಭ್ರಮಿಸುವ ಅವನು
ಮುಗ್ಧನೋ ಕ್ರೂರಿಯೋ
ಅರಿವಾಗುವುದಿಲ್ಲ.
*
'ದೀಪದ ಹುಳು' ಹೆಣ್ಣಿನ ಕುರಿತ ಸಶಕ್ತ ಪ್ರತೀಕ . ದೀಪದ ಹುಳುವಿನ ಕನಸು ಬಗೆಬಗೆಯದಾದರೂ ಕಡೆಗೆ ಸುಟ್ಟು ಕರಕಲಾಗುವ ಹಿಂಸೆ. ಆದರೆ ಕರಕಲಾಗುವ ಮೊದಲಿನ ಕ್ಷಣಗಳ ಉತ್ಕಟ ಪ್ರೇಮದ ಧ್ಯಾನ ಈ ಕವಿತೆಗಳು.
ನನ್ನವ್ವ ನನ್ನ ಹೆರುವ ಮೊದಲೇ
ಸ್ವಾಭಿಮಾನವನ್ನು ಹೆತ್ತಿದ್ದಳು
ಪ್ರೇಮ
ಕೊರಳ ಮೇಲಿನ ಕುಣಿಕೆಯಾದಾಗಲೂ
ಸಾವ ಕ್ಷಣಕ್ಷಣವನ್ನು ಇನ್ನಿಲ್ಲದಂತೆ ಅಪ್ಪಿಕೊಂಡಿದ್ದೇನೆ.
*
ಇನ್ನೂ deep ಆಗಿ ಈ ಮುಗ್ಧ ಲೋಕದೊಳಗೆ ಇಳಿದಾಗ ಪದ್ಯಗಳು ಹೆಚ್ಚು ಕಾಡುತ್ತವೆ. ಮಂಜುಳಾ ಹುಲಿಕುಂಟೆ ಅವರಿಗೆ ಶುಭಾಶಯಗಳು
*
ಕಾಜೂರು ಸತೀಶ್
No comments:
Post a Comment