ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, January 5, 2020

ಒಂದು ಯುದ್ಧಚಿತ್ರ


ಸತ್ತು ಮಲಗಿದ
ಅವಳ ಎದೆಯ ಮೇಲೆ
ಒಂದು ಬೂಟುಗಾಲಿನ ಗುರುತು.

'ಯಾರದಿರಬಹುದು ಆ ಕಾಲು?'
ಯೋಚಿಸಲಿಲ್ಲ

ಆ ಕಾಲಿಗೆ ಎಣ್ಣೆ ಸವರಿ
ಸ್ನಾನ ಮಾಡಿಸಿದ ಎರಡು ಕೈಗಳ ನೆನೆದೆ
ನೆತ್ತರ ಬಸಿದು ಹಾಲುಣಿಸಿದ
ಇನ್ನೂ ಊದಿಕೊಂಡೇ ಇರುವ
ಮಿಡಿಯುತ್ತಲೇ ಇರುವ ಅವಳ ಎದೆಯ ಕುರಿತೂ.
*

ಮಲಯಾಳಂ ಮೂಲ - ಚಿತ್ರ ಕೆ ಪಿ


ಕನ್ನಡಕ್ಕೆ- ಕಾಜೂರು ಸತೀಶ್


No comments:

Post a Comment