ಸಾಬ್ಲು ಥಾಮಸ್ ವಿ.
ಕೂಡಿಗೆ ಮೀನು ಮಾರ್ಕೆಟ್ ಬಳಿಯ
ಸೇತುವೆಯ ಕೆಳಗೆ
ಕತ್ತಲು ಬಿದ್ದೆದ್ದು ಹಾರಾಡಿದ ರಾತ್ರಿಯ ಹೊತ್ತು.
' ನೀರೊಳಗೆ ಬಿದ್ದು ಹೊಯ್ದಾಡುತ್ತಿರುವ ಚಂದ್ರ
ಥೇಟ್ ಮೀನಿನಂತಿದೆ'
ಎಂದೆ.
ನನ್ನ ಗೆಳೆಯ
ಸಸ್ಯಾಹಾರಿ .
ಅವನ ಪ್ರಕಾರ,
'ನಾನ್ವೆಜ್ ಉಪಮೆಯಲ್ಲಿ ಚಂದ್ರನಿರುವುದಿಲ್ಲ.
ನೀರೊಳಗೆ ಹೊಯ್ದಾಡುತ್ತಿರುವುದು ಬಿಂಬ ಮಾತ್ರ
ಒಂದು ಬೂದುಗುಂಬಳದಂತೆ.
ಇಬ್ಬರೂ
ತರ್ಕ-ಸಿದ್ಧಾಂತಗಳನ್ನೆಲ್ಲ ಕಲಿತದ್ದು
ಪಾರ್ಟಿ ಕ್ಲಾಸಿನಲ್ಲಿ,
ಕಾಲೇಜಿನಲ್ಲಿ.
'ಚಂದ್ರ ಪೂರ್ಣಬಿಂಬವಲ್ಲ,
ಅಮವಾಸ್ಯೆಯ ನಂತರದ
ತೆಳುವಾದ ಒಂದು ಗೆರೆ.
ಬಾಳೆಮೀನಿನ ಹಾಗೆ ಚಡಪಡಿಸುತ್ತದೆ ಅದು
ಕವಿತೆ,ಕಲ್ಪನೆಯೊಳಗೆಲ್ಲ'
ಎಂದೆ.
ಹೀಗೆಲ್ಲ ತರ್ಕಿಸಿದರೂ,
ಸೇತುವೆ ದಾಟುವಷ್ಟರಲ್ಲಿ
ನಮ್ಮಿಬ್ಬರಿಗೆ ಸುಸ್ತೋ ಸುಸ್ತು.
ದೂರದ ಮನೆಯಲ್ಲಿ
ಮತ್ತೊಬ್ಬಳು ಕಾಯುತ್ತಿದ್ದಾಳೆ-
ಚಂದ್ರನ ಮೈಪಡೆದವಳು.
ನನ್ನ ಹಸಿವು
ಸಾಂಬಾರಾಗಿ ಬೇಯುತ್ತಿದೆ ಅಲ್ಲಿ.
ಅವಳನ್ನು ಮಾತ್ರ
ಚಂದ್ರನೊಂದಿಗೆ ಹೋಲಿಸುವುದಿಲ್ಲ.
**
ಮಲಯಾಳಂ ಮೂಲ- ಸಾಬ್ಲು ಥಾಮಸ್ ವಿ.
ಕನ್ನಡಕ್ಕೆ -ಕಾಜೂರು ಸತೀಶ್
ತುಂಬ ಚಂದದ ಅನುವಾದ ಮತ್ತು ಕವನ!
ReplyDeleteಕವಿತೆಯ ಪೂರ್ಣಚಂದ್ರನಲ್ಲದಿದ್ದರೂ ತೆಳುವಾದ ಒಂದು ಗೆರೆ
ReplyDeleteಬಿಂಬವಾಗಿ ನಮ್ಮ ಬಳಿ ತಲುಪಿದೆಯೆನಿಸುತಿದೆ