ಕುಶಾಲನಗರದ ಹೌಸಿಂಗ್ ಬೋರ್ಡಿನಲ್ಲಿ
ನಲವತ್ತೊಂಬತ್ತು ಮನೆಗಳು .
ಆ ನಲವತ್ತೊಂಬತ್ತು ಮನೆಗಳ ನಡುವೆ
ಗಡಗಡ ಚಳಿಯನು ಸಹಿಸಲಾರದೆ
ಸತ್ತೇ ಹೋದ ದಾರಿಗಳು.
ಮಟಮಟ ಮಧ್ಯಾಹ್ನದ ಹೊತ್ತಲ್ಲಿ
ನಮ್ಮೀ ಭಿಕ್ಷುಕ ನಡೆಯುತ್ತಿದ್ದ .
ಐವತ್ತೊಂದು ಮನೆಗಳಲ್ಲೂ
ಹುರಿಯುತ್ತಿದ್ದ ಮೀನಿನ ಪರಿಮಳ
ಉಣಬಡಿಸಿತು ಇವನಿಗೆ .
ಒಂದಾನೊಂದು ಕಾಲದಲ್ಲಿ
ಮಧ್ಯಾಹ್ನದ ಊಟಕ್ಕೆಂದು
ಇಸ್ಕೂಲಿಂದ ಮನೆಗೋಡುವಾಗ
ಹುರಿಯುವ ಮೀನಿನ ಪರಿಮಳವೆಲ್ಲ
ಜೇಸುದಾಸರ ಹಾಡಲಿ ಬೆರೆತು
ಹೀಗೇ ನಲಿದು ಬರುತಲಿತ್ತು.
'ಮಟಮಟ ಮಧ್ಯಾಹ್ನದ ಹಾಡು ನಾನು
ಹುರಿಯುವ ಮೀನಿನ ಪರಿಮಳ ನಾನು'
ಹೀಗೆಂದು ಪರಿಚಯಿಸಿಕೊಳ್ಳುವನು.
ಮಟಮಟ ಮಧ್ಯಾಹ್ನದ ಹೊತ್ತಲ್ಲಿ
ನಲವತ್ತೊಂಬತ್ತು ಮನೆಯೊಳಗೆಲ್ಲ
ಕಣ್ಣಮಿಟುಕಿಸದೆ ನೋಡುವನು.
ಎಲ್ಲ ಮನೆಗಳಿಗೂ ಬಾಗಿಲುಗಳು
ಎಲ್ಲ ಮನೆಗಳಿಗೂ ಗೇಟುಗಳು
ಎಲ್ಲ ಮನೆಗಳಿಗೂ ಕಿಟಕಿಗಳು
ಎಲ್ಲ ಮನೆಗಳಿಗೂ ಮುಚ್ಚಿಯೇ ಇರುವ
ಗಂಟಿಕ್ಕಿದ ಮುಖದ ಬಾಗಿಲುಗಳು
ತೆರೆಯದೇ ಇರುವ ಕಿಟಕಿಗಳೆಲ್ಲ
ಕೀಳುತ್ತಿರುವವು ಮೀಸೆಯನು.
ಹೀಗಿದ್ದರೂ ಎಲ್ಲ ಮನೆಗಳಿಂದ
ಪರಿಮಳ ಸುತ್ತೆಲ್ಲ ಹಬ್ಬುತಿದೆ.
ಅದಕ್ಕೆಂದೇ ಒಂದೊಂದು ಅಡುಗೆ ಕೋಣೆ
ಒಂದೊಂದು ಗ್ಯಾಸ್ ಒಲೆ
ಎಲ್ಲಾ ಒಲೆಗಳ ಮೇಲೊಂದು
ಇಷ್ಟಗಲದ ಬಾಣಲೆ
ಎಲ್ಲ ಬಾಣಲೆಗಳಲೂ ಕೂಡ
ಮಿನುಮಿನುಗುವ ಮೀನುಗಳು
ಎಲ್ಲ ಅಡುಗೆ ಕೋಣೆಗಳಲ್ಲೊಬ್ಬಳು
ಮೀನು ಹುರಿವ ಹೆಣ್ಣುಮಗಳು .
ನಮ್ಮೀ ಭಿಕ್ಷುಕ ಹಾಯಾಗಿ ಮಲಗುವ
ಮುರುಕಲು ಕೋಣೆಯ ತುಂಬೆಲ್ಲ
ಕುಳಿಮಾಡಿದ ಕುಳಿಯಾನೆಗಳು*
ಒಂದೊಂದು ಕುಳಿಯಲ್ಲೂ ಒಂದೊಂದು ಕುಳಿಯಾನೆ
ಸಂಶಯಪಟ್ಟೊಮ್ಮೆ ಊದಿದರೆ
ಮಣ್ಣೆಲ್ಲ ಮೇಲಕೆ ಹಾರಿ ಹಾರಿ
ಕುಳಿಯಾನೆಗಳನು ತೋರಿಸುವುದು .
ಮಧ್ಯಾಹ್ನದ ಹಾಡು ಮುಂಡಾಸನು ಸುತ್ತಿ
ನಡೆದು ಬಂದಿತು ಅಂದೂ ಕೂಡ.
'ಮಟಮಟ ಮಧ್ಯಾಹ್ನದ ಹಾಡು ನಾನು
ಹುರಿಯುವ ಮೀನಿನ ಪರಿಮಳ ನಾನು '
ನಡೆದೇ ಹೋಯಿತು ಪರಿಚಯಿಸುತ್ತಾ.
ಒಮ್ಮೆಲೇ ನಮ್ಮೀ ಭಿಕ್ಷುಕನೀಗ
ಎಲ್ಲ ಕುಳಿಗಳಿಗೂ ಊದುತಿರುವನು.
ಎಲ್ಲ ಕುಳಿಗಳಲೂ ಕಬ್ಬಿಣದ ಗೇಟುಗಳು
ಕಿಟಕಿ-ಬಾಗಿಲುಗಳು
ಅಟ್ಟಗಳು,ಗೋಡೆಗಳು
ಗ್ಯಾಸ್ ಒಲೆಗಳು
ಹುರಿವ ಬಾಣಲೆಗಳು
ಹಾರಲು ತೊಡಗಿವೆ ಮಣ್ಣಿನೊಂದಿಗೆ.
ಇಗೋ ನೋಡಿ ನಿದ್ರಿಸುತಿರುವನು
ನಮ್ಮೀ ಭಿಕ್ಷುಕ ಹಾಯಾಗಿ
ಜೊತೆಯಲ್ಲೇ ಕುಳಿತುಕೊಂಡಿವೆ
ನಲವತ್ತೊಂಬತ್ತು ಕುಳಿಯಾನೆಗಳು
**
ಮಲಯಾಳಂ ಮೂಲ- ವಿಷ್ಣುಪ್ರಸಾದ್
ಕನ್ನಡಕ್ಕೆ -ಕಾಜೂರು ಸತೀಶ್
----------------------------------------
*ಕುಳಿಯಾನೆ = ಮಣ್ಣಲ್ಲಿ ಆಕರ್ಷಕವಾದ ಕುಳಿ ಮಾಡಿ ಜೀವಿಸುವ ಸಣ್ಣ ಜೀವಿ[ant lion].

Adbhutha.... keep it up.....hats off.............
ReplyDeleteThis comment has been removed by the author.
ReplyDeleteಕಥನ ಕವನ ಮಾದರಿಯ ಈ ಕವಿತೆ ಭಿಕ್ಷುಕನಿಗೆ ಕುರುಡಾಗಿರುವ ಸಮಾಜವನ್ನು ವಿಡಂಬಿಸುತ್ತಲೇ,ಬಾಲ್ಯದ ಮುಗ್ಧತೆಯನ್ನು ತೆರೆದಿಡುತ್ತಾ...ವಿಷಾದವೊಂದನ್ನು ಸಹೃದಯನ ಎದುರು ಹರಡುತ್ತದೆ. ಅನುವಾದ ಮೂಲ ಆಶಯವನ್ನು ಕಟ್ಟಿಕೊಟ್ಟಿದೆ.

ReplyDeleteಎದೆ ತಟ್ಟಿದ ಕವಿತೆ
ReplyDelete