ಮೊದಮೊದಲೆಲ್ಲ
ಪ್ರತೀಕ್ಷೆಯ ಕಪ್ಪುಹಕ್ಕಿಗಳು
ಮೊಬೈಲ್ ಫೋನಿನಲ್ಲಿ ಕುಳಿತು
ನೆಂಟರು ಬರುವರೆಂದು ಕೂಗಿ ಹೇಳುತ್ತಿತ್ತು.
ಈಗ
ಟಚ್ ಸ್ಕ್ರೀನ್ ಮೊಬೈಲ್ ಆಗಿದ್ದಕ್ಕೋ ಏನೊ
ಕಪ್ಪುಹಕ್ಕಿಗಳು ಕುಳಿತು
ನೆಂಟರು ಬರುವರೆಂದು ಹಾಡಲು
ರೆಂಬೆಗಳು ಸಿಗುತ್ತಿಲ್ಲ
ಪಾಪ
ಹಾರಿ ಹಾರಿ ರೆಕ್ಕೆಗಳು ಬಳಲಿವೆ
*
ಮಲಯಾಳಂ ಮೂಲ- *
ಜಿನು ಕೊಚ್ಚುಪ್ಲಾಮೂಟ್ಟಿಲ್
ಕನ್ನಡಕ್ಕೆ-
ಕಾಜೂರು ಸತೀಶ್
No comments:
Post a Comment