ಮನುಷ್ಯರು ನಾವು!
ಯಾರದಾದರೂ ತಲೆಯೊಡೆದು ಖಜಾನೆಗಳ ನಿರ್ಮಿಸಿಕೊಳ್ಳುತ್ತೇವೆ. ಬಂಗಲೆಗಳ ಕಟ್ಟಿಕೊಳ್ಳುತ್ತೇವೆ. ಆಧುನೀಕತೆಯ ಸಿ.ಸಿ. ಕ್ಯಾಮರಾಗಳ ಕಣ್ಣಿಗೆ ಮಣ್ಣೆರಚಿ, ಕಣ್ಣುಮುಚ್ಚಿ ಹಾಲು ಕುಡಿದು ಸಭ್ಯತೆಯ ಸೋಗುಹಾಕಿಕೊಳ್ಳುತ್ತೇವೆ. ಹೊಟ್ಟೆ ತುಂಬಿದಷ್ಟೂ ಆಸೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತೇವೆ; ಪೂರೈಕೆಗೆ ಅನ್ಯಾಯದ ಹಾದಿ ಹಿಡಿಯುತ್ತೇವೆ. ಅದನ್ನೇ ತಲೆತಲಾಂತರಗಳಿಗೆ ಹಂಚಿಬಿಡುತ್ತೇವೆ...
*
ಆದರೆ, ಇವರಿಬ್ಬರು?!
ಮೇಲಿನ ಅಷ್ಟೂ ಮಾತುಗಳನ್ನು ಸುಳ್ಳಾಗಿಸಿಬಿಡುತ್ತಾರೆ!
*
ಗೆಳೆಯ ಜಾನ್ ಸುಂಟಿಕೊಪ್ಪ ಅವರು ಪರಿಚಯಿಸಿದ ಇವರ ಬಗ್ಗೆ ಬರೆಯಲೇಬೇಕೆಂದು ಕುಳಿತೆ. ಇವತ್ತಿಗೆ ಆರನೇ ದಿನ!!
ಮೊದಲ ದಿನ ಇವರಿಬ್ಬರ ಬಗ್ಗೆ ಒಂದು ವಾಕ್ಯ ಬರೆದೆ. ಆಮೇಲೆ ಅದು ಮುಂದಕ್ಕೆ ಹೊರಳಲೇ ಇಲ್ಲ. ಎರಡನೇ ದಿನ ಒಂದಕ್ಷರವೂ ಮೊಳೆಯಲಿಲ್ಲ. ಮೂರನೇ ದಿನ ನಾಲ್ಕಾರು ಸಾಲುಗಳು ಹುಟ್ಟಿದವು- ವಸ್ತುಸ್ಥಿತಿಯ ನೇರಾನೇರ ನಿಲ್ಲಬಲ್ಲ ಕಸುವನ್ನು ಕಳೆದುಕೊಡಿದ್ದವು. ನಾಲ್ಕನೇ ದಿನ ಬರೆಯಲೇಬೇಕೆಂಬ ಹಠತೊಟ್ಟು ಕುಳಿತೆ; ಆಗಲಿಲ್ಲ. ಐದನೇ ದಿನವೂ ಹೀಗೇ...
ಹೃದಯವಷ್ಟೇ ಬರೆಯಬಲ್ಲ ಸಾಲುಗಳನ್ನು ನಾನೇ ಬರೆಯಲು ಹೊರಟದ್ದರಿಂದಾಗಿಯೇ ಹೀಗೆ ತಿಣುಕಾಡಿದ್ದು, ತಿಣುಕಾಡುತ್ತಿರುವುದು!
*
ಅಂದ ಹಾಗೆ ನಾನು ಬರೆಯಲು ಹೊರಟ ಇವರಿಬ್ಬರು- ಬೆಂಗಳೂರಿನ ಶ್ರೀ ಗುರುಪ್ರಸಾದ್ ಎನ್. - ಶ್ರೀಮತಿ ಪೂರ್ಣಿಮಾ ಅಯ್ಯಂಗಾರ್ ದಂಪತಿಗಳು.ಅವರ ಮೇರು ವ್ಯಕ್ತಿತ್ವವನ್ನು ಬರೆಯಬೇಕೆಂದುಕೊಂಡಾಗಿನಿಂದ(ಜೂನ್ ೧೮ರಿಂದ) ಇಲ್ಲಿಯವರೆಗೆ ನಾಲ್ಕು ತಿಂಗಳುಗಳೇ ಸರಿದುಹೋಗಿವೆ.
ಕುಗ್ರಾಮದಲ್ಲಿರುವ ಸೌಲಭ್ಯವಂಚಿತ ಸರ್ಕಾರಿ ಶಾಲೆಯ ಮಕ್ಕಳೇ ಇವರ ಟಾರ್ಗೆಟ್. ಎಂಥ ಕುಗ್ರಾಮವಾದರೂ ಸರಿ, ತಿಂಗಳಾನುಗಟ್ಟಲೆ ಯೋಚಿಸಿ, ಯೋಜಿಸಿ ಅಂತಹ ಶಾಲೆಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿನ ಪೋಷಕರೊಂದಿಗೆ, ಮಕ್ಕಳೊಂದಿಗೆ ದಿನ ಕಳೆಯುತ್ತಾರೆ. ಕಂಪ್ಯೂಟರ್, ಅಮೂಲ್ಯವಾದ ಪುಸ್ತಕಗಳು, ಪ್ರತೀ ಮಗುವಿಗೆ ಹೈಜೀನ್ ಕಿಟ್, ನೋಟ್ ಪುಸ್ತಕಗಳು, ಕ್ರೀಡಾ ಸಾಮಗ್ರಿಗಳು, ಬಟ್ಟೆ , ಶೂ- ಸಾಕ್ಸ್, ವಿದ್ಯುತ್ ಸೌಲಭ್ಯವಿಲ್ಲದ ಮಕ್ಕಳಿಗೆ ಸೋಲಾರ್ ಲ್ಯಾಂಪ್ .. ಹೀಗೆ ಸರ್ಕಾರ ಮಾಡಬೇಕಾದ ಕೆಲಸವನ್ನು ತಾವು ಮಾಡಿ, ಪ್ರತೀ ಮಗುವಿನಲ್ಲೂ ಭವ್ಯ ಭಾರತದ ಕನಸ್ಸನ್ನು ಕಟ್ಟಿಕೊಳ್ಳುತ್ತಾರೆ. ಶಾಲೆಯೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಾ ಸಲಹೆ-ಸಹಕಾರ ನೀಡುತ್ತಾರೆ. ಶಾಲೆಗಳಿಂದಾಚೆಗೂ ಅವರ ಸೇವೆ ವಿಸ್ತರಿಸಿಕೊಳ್ಳುತ್ತಾರೆ.
*
ಸಿಕ್ಕಿದ್ದನೆಲ್ಲ ಕೊಳ್ಳೆಹೊಡೆಯುವ ವರ್ತಮಾನದ ಭ್ರಷ್ಟ ವ್ಯವಸ್ಥೆಯ ನಡುವೆಯೂ ಇಂಥವರಿದ್ದಾರೆ ಎನ್ನುವುದು ಮನುಷ್ಯತ್ವದ ಮೇಲೆ, ಮನುಷ್ಯರ ಮೇಲೆ ಭರವಸೆಯನ್ನು ಮೂಡಿಸುತ್ತದೆ. ಯಾವ ಫಲಾಪೇಕ್ಷೆಯ ಹಂಬಲವಿಲ್ಲದೆ ಪರರಿಗಾಗಿ ತಮ್ಮ ಬದುಕನ್ನೇ ತೆತ್ತುಕೊಳ್ಳುವ ಇಂತಹ ಉದಾತ್ತ ವ್ಯಕ್ತಿತ್ವಗಳ ಸಂಖ್ಯೆ ಸಾವಿರವಾಗಲಿ.
ಶರಣು ತಮ್ಮಿಬ್ಬರಿಗೆ!
*
ಕಾಜೂರು ಸತೀಶ್

No comments:
Post a Comment