ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Thursday, February 20, 2014

ಅವ್ವನ ಸೀರೆ


ಅವ್ವನನ್ನು ಕಂಡರೆ
ಅವಳ ಸೀರೆ ನೆನಪಾಗೋದೇ ಇಲ್ಲ.



ಒಣಗಲು ಹಾಕಿದಾಗಲಷ್ಟೆ ಅದನ್ನು ದಿಟ್ಟಿಸುತ್ತೇನೆ.
ಕಿಡಿಮುಟ್ಟಿದ ನೆನಪು ಅದರಲ್ಲಿ ತೂತುಬಿದ್ದಿರುತ್ತದೆ.
ಅವಳ ಚರ್ಮದಾಳಕ್ಕೂ ಇಳಿದಿರಬಹುದಾದ ಅದು
ಹೊಟ್ಟೆ ತುಂಬಿದಾಗಲೆಲ್ಲ
ಸುಡಲೆಂಬಂತೆ ಉಳಿದುಕೊಂಡಿದೆ.



ಇನ್ನೂ ಎಣಿಸಲಾಗಲಿಲ್ಲ
ಗಾರ್ಮೆಂಟ್ಸಿನ ಗೆಳೆಯ ಗೆಳತಿಯರು
ಬೆವರು ಬಸಿದು ಒತ್ತಿದ ಅದರ ಹೂವುಗಳನ್ನು.
ಹೀರಲು ಬಂದ ದುಂಬಿಗಳೆಲ್ಲ
ತುಟಿ ಸುಟ್ಟುಕೊಂಡಿವೆ.



ಒಣಗಲು ಬಿಟ್ಟ ಅವಳ ಸೀರೆಯಲ್ಲಿ
ತೊಟ್ಟಿಕ್ಕುವ ನೀರು
ಅವಳ ಕಣ್ಣೊಳಗೇ ಪರಕಾಯ ಪ್ರವೇಶ ಮಾಡಿಬಿಟ್ಟಿದೆ.



ಪ್ರತೀ ಸಂಜೆ
ಸೀರೆಯೂ,ಅವಳೂ
ಸೂರ್ಯನ ಜಠರದಿಂದ ಪಾರಾಗಿ ಬಂದಿರುತ್ತಾರೆ.
ತೂಗಿಕೊಂಡರೆ ತಂತಿಗೆ
ಒಂದು ಸಣ್ಣ ಗಾಳಿಗೂ ಹೊಯ್ದಾಟ.


ಅವ್ವನನ್ನು ಕಂಡರೆ
ಅವಳ ಸೀರೆ ನೆನಪಾಗೋದೇ ಇಲ್ಲ.


**

-ಕಾಜೂರು ಸತೀಶ್

Tuesday, February 18, 2014

ಆ ಹಿಂಸೆ ಮತ್ತು ಮಸಾಲೆ ದೋಸೆ

ಗೆಳೆಯನ ಆರೋಗ್ಯ ಹದಗೆಟ್ಟಿತ್ತು; ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿತ್ತು. ವಾರದ ಹಿಂದೆಯೇ ರಜೆಗಾಗಿ ಅರ್ಜಿ ಸಲ್ಲಿಸಿದ್ದರು. ನರಳುತ್ತಲೇ ಇದ್ದ ಅವರು , ರಜೆ ಮಂಜೂರಾದ ದಿನ ಕಚೇರಿಗೆ ಹೋಗಿ ಕೆಲವು ಕಡತಗಳನ್ನು ಒಪ್ಪಿಸಿ ಆಸ್ಪತ್ರೆಗೆ ಹೊರಡಲು ಸಿದ್ಧರಾಗುತ್ತಿದ್ದರು.ಆಗ, ಗುಮಾಸ್ತೆಯೊಬ್ಬಳಿಂದ ಬೇಡಿಕೆ ಬಂತು: "ರಜೆ ಸ್ಯಾಂಕ್ಷನ್ ಆಯ್ತಲ್ಲಾ, ಒಂದು ಪ್ಲೇಟ್ ಮಸಾಲೆ ದೋಸೆ ಕೊಡ್ಸಿ ಹೋಗು.."
*

ಆ ಘಟನೆಯನ್ನು ಕೇಳಿದ ಮೇಲೆ ಮೈಯೆಲ್ಲಾ ಉರಿದಂತಾಗಿ ದಿನವಿಡೀ ಮೌನಕ್ಕೆ ಜೋತುಬಿದ್ದಿದ್ದೆ.

Monday, February 17, 2014

ಲಡಾಯಿ ಪ್ರಕಾಶನ: ಜಾಣರು*

ಲಡಾಯಿ ಪ್ರಕಾಶನ: ಜಾಣರು*: ಮಲಯಾಳಂ ಮೂಲ: ಪವಿತ್ರನ್ ತೀಕ್ಕುನಿ. ಕನ್ನಡಕ್ಕೆ:ಕಾಜೂರು ಸತೀಶ್   ನಿನ್ನ ಮಗ ಸೈಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ. ನನ್ನ ...

Sunday, February 16, 2014

ಸಹಾಯ

ನಾನು ಸತ್ತೊಡನೆ
ಪ್ರಿಯ ವೈರಿಗಳೇ,
ನಿಮ್ಮ ನಾಲಗೆಯಿಂದ
ಸುಡಲಿಕ್ಕಾದರೂ ಸಹಕರಿಸಿ!



-ಕಾಜೂರು ಸತೀಶ್

ಬೋನ್ಸಾಯ್ ಸ್ವಗತ

ಹಾಡು ಹುಟ್ಟುವ ಹೊತ್ತು
ನೋವು ನರಳುತ್ತದೆ.

ಲಡಾಯಿ ಪ್ರಕಾಶನ: ಮಲ್ಲು ಗರ್ಲ್ ಹಾಟ್ ಮೊಬೈಲ್ ಕಾಲ್

ಲಡಾಯಿ ಪ್ರಕಾಶನ: ಮಲ್ಲು ಗರ್ಲ್ ಹಾಟ್ ಮೊಬೈಲ್ ಕಾಲ್: ಮಲಯಾಳಂ ಮೂಲ: ಎಂ.ಎಸ್. ಬನೇಶ್ ಕನ್ನಡಕ್ಕೆ: ಕಾಜೂರು ಸತೀಶ್ ಹಲೋ.. ಉಂ.. ಹಾಯ್.. ಉಂ.. ಏನ್ಮಾಡ್ತಿದ್ದೀಯ? ಏನಿಲ್ಲ ಸುಮ್ನೆ ಮಲ್ಗಿದ...

ಲಡಾಯಿ ಪ್ರಕಾಶನ: ಬೆವರಿನ 'ಹನಿ'ಗಳು

ಲಡಾಯಿ ಪ್ರಕಾಶನ: ಬೆವರಿನ 'ಹನಿ'ಗಳು: ಕಾಜೂರು ಸತೀಶ್ ಹಾರೆ ಹಿಡ್ದ ಕೈಗಳಲ್ಲಿ ಚೊಳ್ಳೆ ಬಂದು ಒಡುದ್ರೆ ರಕ್ತವಿಲ್ಲ-ನೀರು;ರಕ್ತನ­ೀರು! *** ಹೊಲ್ತಕ್ಹೊಂಟ್ರೆ ಉಸುರಾಡ್ತವೆ ಹೊಟ್ಟೆ. ರಟ್ಟೆ ಮೆದುವ...

Saturday, February 15, 2014

ಅಂದಿನಿಂದ ಇಂದಿನವರೆಗೆ...:     ಬೇಲಿ ಕಾಜೂರು ಸತೀಶ್                   -೧- ಅಪ್...

ಅಂದಿನಿಂದ ಇಂದಿನವರೆಗೆ...:  
 
ಬೇಲಿ
ಕಾಜೂರು ಸತೀಶ್ 
                 -೧-


ಅಪ್...
:     ಬೇಲಿ ಕಾಜೂರು ಸತೀಶ್                   -೧- ಅಪ್ಪನಪ್ಪನಪ್ಪ ಹೊಲಕ್ಕೆ ನೆಟ್ಟ ಕಳ್ಳಿ ಬೇಲಿ ಎಷ್ಟೊಂದು ಮರಿಮಕ್ಕಳನ್ನು ಹಡೆದಿದೆ. ಕರುಳ ಬಳ್ಳಿಯಂತ...

ಲಡಾಯಿ ಪ್ರಕಾಶನ: ಕಾಜೂರು ಸತೀಶ್ ಕವಿತೆ

ಲಡಾಯಿ ಪ್ರಕಾಶನ: ಕಾಜೂರು ಸತೀಶ್ ಕವಿತೆ: ಕಾಡು ಕವಿತೆ   ನನ್ನ ಜನರೇ, ನಿಮ್ಮಲ್ಲುಕ್ಕುವ ಜಲಪಾತಗಳ, ಅಲ್ಲಿ ಪಾಚಿಗಟ್ಟಿದ ಉರುಟುರುಟು ಎಲುಬುಗಳ, ನಿಮ್ಮ ಸಿಂಡುಗಳ, ಮೊಳಕೆಯೊಡೆವ ಮಹುವಾ ಬ...

ಲಡಾಯಿ ಪ್ರಕಾಶನ: ಕಾಜೂರು ಸತೀಶ್ ಕವಿತೆ

ಲಡಾಯಿ ಪ್ರಕಾಶನ: ಕಾಜೂರು ಸತೀಶ್ ಕವಿತೆ: ಇಂದಿನ ವಾರ್ತಾಭಾರತಿ

ರಾತ್ರಿಯ ನದಿ

ರಾತ್ರಿಯ ನದಿ ಬೇಸಿಗೆಯಲ್ಲೂ ಮಾತನಾಡುತ್ತದೆ. -

ಕಾಜೂರು ಸತೀಶ್