Tuesday, April 19, 2016

೧೯೪೭

ಅವನು ಸತ್ತ ಮೇಲೆ
ತನ್ನ ನೆತ್ತಿಯೊಳಗೆ ಹೊಕ್ಕಿದ್ದ
ಗುಂಡುಗಳನ್ನು ಹೊರತೆಗೆದ.

ಚರಕ ತಿರುಗಿಸುತ್ತಿದ್ದ ಮುದುಕನಲ್ಲಿ
ಮಗು ಕೇಳಿತು:
'ಇದರಲ್ಲಿ ಎಷ್ಟಿವೆ ಹೇಳಿ ನೋಡೋಣ?'

ಮುದುಕ ಯೋಚಿಸಿ ಹೇಳಿದ-
'೧'

ಮಗು ತಲೆ ಅಲ್ಲಾಡಿಸಿ ಹೇಳಿತು-
'ಊಹೂಂ'.

'೯'
'ಅಲ್ಲ'.

'೪'
'ಅಲ್ಲವೇ ಅಲ್ಲ'

'೭'
ಅವರಿಬ್ಬರೂ ಒಟ್ಟಿಗೆ ನಕ್ಕರು.

ಮುದುಕ ತನ್ನೆದೆಯ ಮೇಲೆ ಬೆರಳಾಡಿಸಿದ
ಈಗ ಒಂದು ಕೆಂಪು ಹೂವಿದೆ ಅಲ್ಲಿ
ಒಂದು ಬಂದೂಕಿನ ಗೋಲಿಯೂ.
*

ಮಲಯಾಳಂ ಮೂಲ- ಆರ್. ರತೀಶ್ ಕೃಷ್ಣ

ಕನ್ನಡಕ್ಕೆ- ಕಾಜೂರು ಸತೀಶ್

No comments:

Post a Comment

ಕಡಲ ಕರೆಯ ಕುರಿತು ಡಾ.ಎಚ್.ಎಸ್.ಅನುಪಮಾ

Listen to Dr HS Anupama, speaking on kajooru Sathish's 'kadala kare', a kannada translation of contemporary malayalam poems #np...