Sunday, November 1, 2015

ದಿನಚರಿ -5

ಹೀಗೆ ಘನಮೌನದಲ್ಲಿ ಒಬ್ಬನೇ ಬದುಕುವುದು ಎಷ್ಟು ಖುಷಿ ಗೊತ್ತಾ? ಅದೆಂಥದ್ದೇ ಹಿಂಸೆಯಾಗಲಿ, ಅಥವಾ ಸತ್ತೇ ಹೋಗಲಿ- ಅದರಲ್ಲಿ ನನಗಂತೂ ತುಂಬ ತುಂಬಾ ಖುಷಿಯಿದೆ!ಒಮ್ಮೆ ಹೀಗೇ ಗಂಭೀರವಾಗಿ ಏನನ್ನೋ ಧ್ಯಾನಿಸುತ್ತಾ ಒಳಗೇ ಕೂತುಬಿಟ್ಟಿದ್ದೆ. ಎರಡನೇ ದಿನ ಪಕ್ಕದವರು ಬಂದು ಬಾಗಿಲು ತಟ್ಟಿದರು! "ಓ.. ನೀವಿದ್ದೀರಾ? ಸದ್ದೇ ಇರ್ರಿಲ್ಲ ಅದ್ಕೆ ಕರ್ದೆ" ಎಂದರು. ಅವರ ಕಲ್ಪನೆಯಲ್ಲಿ ನನ್ನ ಸಾವು ಹೇಗಿದ್ದೀರಬಹುದೆಂದು ಊಹಿಸುತ್ತಾ ಹಲ್ಲುಗಳು ಕಾಣದ ಹಾಗೆ ನಕ್ಕುಬಿಟ್ಟಿದ್ದೆ!
**

-ಕಾಜೂರು ಸತೀಶ್

No comments:

Post a Comment