Saturday, March 28, 2015

ಚಂದ್ರನನ್ನು ಹೋಲಿಸುವ ಬಗೆಸಾಬ್ಲು ಥಾಮಸ್ ವಿ.


ಕೂಡಿಗೆ ಮೀನು ಮಾರ್ಕೆಟ್ ಬಳಿಯ
ಸೇತುವೆಯ ಕೆಳಗೆ
ಕತ್ತಲು ಬಿದ್ದೆದ್ದು ಹಾರಾಡಿದ ರಾತ್ರಿಯ ಹೊತ್ತು.


' ನೀರೊಳಗೆ ಬಿದ್ದು ಹೊಯ್ದಾಡುತ್ತಿರುವ ಚಂದ್ರ
ಥೇಟ್ ಮೀನಿನಂತಿದೆ'
ಎಂದೆ.


ನನ್ನ ಗೆಳೆಯ
ಸಸ್ಯಾಹಾರಿ .


ಅವನ ಪ್ರಕಾರ,
'ನಾನ್ವೆಜ್ ಉಪಮೆಯಲ್ಲಿ ಚಂದ್ರನಿರುವುದಿಲ್ಲ.
ನೀರೊಳಗೆ ಹೊಯ್ದಾಡುತ್ತಿರುವುದು ಬಿಂಬ ಮಾತ್ರ
ಒಂದು ಬೂದುಗುಂಬಳದಂತೆ.


ಇಬ್ಬರೂ
ತರ್ಕ-ಸಿದ್ಧಾಂತಗಳನ್ನೆಲ್ಲ ಕಲಿತದ್ದು
ಪಾರ್ಟಿ ಕ್ಲಾಸಿನಲ್ಲಿ,
ಕಾಲೇಜಿನಲ್ಲಿ.


'ಚಂದ್ರ ಪೂರ್ಣಬಿಂಬವಲ್ಲ,
ಅಮವಾಸ್ಯೆಯ ನಂತರದ
ತೆಳುವಾದ ಒಂದು ಗೆರೆ.
ಬಾಳೆಮೀನಿನ ಹಾಗೆ ಚಡಪಡಿಸುತ್ತದೆ ಅದು
ಕವಿತೆ,ಕಲ್ಪನೆಯೊಳಗೆಲ್ಲ'
ಎಂದೆ.


ಹೀಗೆಲ್ಲ ತರ್ಕಿಸಿದರೂ,
ಸೇತುವೆ ದಾಟುವಷ್ಟರಲ್ಲಿ
ನಮ್ಮಿಬ್ಬರಿಗೆ ಸುಸ್ತೋ ಸುಸ್ತು.


ದೂರದ ಮನೆಯಲ್ಲಿ
ಮತ್ತೊಬ್ಬಳು ಕಾಯುತ್ತಿದ್ದಾಳೆ-
ಚಂದ್ರನ ಮೈಪಡೆದವಳು.
ನನ್ನ ಹಸಿವು
ಸಾಂಬಾರಾಗಿ ಬೇಯುತ್ತಿದೆ ಅಲ್ಲಿ.


ಅವಳನ್ನು ಮಾತ್ರ
ಚಂದ್ರನೊಂದಿಗೆ ಹೋಲಿಸುವುದಿಲ್ಲ.
**

ಮಲಯಾಳಂ ಮೂಲ- ಸಾಬ್ಲು ಥಾಮಸ್ ವಿ.

ಕನ್ನಡಕ್ಕೆ -ಕಾಜೂರು ಸತೀಶ್

2 comments:

  1. ತುಂಬ ಚಂದದ ಅನುವಾದ ಮತ್ತು ಕವನ!

    ReplyDelete
  2. ಕವಿತೆಯ ಪೂರ್ಣಚಂದ್ರನಲ್ಲದಿದ್ದರೂ ತೆಳುವಾದ ಒಂದು ಗೆರೆ
    ಬಿಂಬವಾಗಿ ನಮ್ಮ ಬಳಿ ತಲುಪಿದೆಯೆನಿಸುತಿದೆ

    ReplyDelete

ನಷ್ಟ

ಮೊದಲ ನೋಟದಲ್ಲಿ ಅಥವಾ ಪ್ರೀತಿಯ ಮೊದಲ ಪರ್ವದಲ್ಲಿ ನನಗೆ ನನ್ನ ಕಣ್ಣುಗಳು ನಷ್ಟವಾದವು. ಎರಡನೇ ಭೇಟಿಯಲ್ಲಿ ಅಥವಾ ಪ್ರೀತಿಯ ಮಧ್ಯ ಪರ್ವದಲ್ಲಿ ನನಗೆ ನನ್ನ ಹೃದಯ ನ...