ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, July 7, 2014

ಜ್ವರ

ಮಳೆಯನ್ನು ನಿಂದಿಸುತ್ತಿರುವ ಅಮ್ಮಾ ..
ವೈದ್ಯರನ್ನು ಹುಡುಕುತ್ತಿರುವ ಅಪ್ಪಾ..
ಸುಡುತ್ತಿರುವ ಹಣೆಯನ್ನು
ಮುಂಗೈಯಲ್ಲಿ ಮುಟ್ಟಿ ನೋಡುತ್ತಿರುವ ಅಕ್ಕಾ...
ಇದು ಜ್ವರವಲ್ಲವೇ ಅಲ್ಲ .





ಕೂದಲುಗಳಲ್ಲಿ
ಒದ್ದೆಯಾದ, ತಣ್ಣನೆಯ ಬೆರಳಾಡಿಸಿ
ನನ್ನನ್ನು ಬಾಚಿ ತಬ್ಬಿಕೊಂಡ
ಮಳೆಯ ಹೃದಯದ ಕಾವು ಅದು.






ಗೊತ್ತಿಲ್ಲವೇ ನಿಮಗೆ ?
ಮಳೆಯ ಮನಸ್ಸೊಂದು ಮರುಭೂಮಿ
ಶರೀರ ವಿಸ್ತಾರ ಕಡಲು.
**

ಮಲಯಾಳಂ ಮೂಲ - ಸುಜೀಷ್ ಎನ್. ಎಂ.




ಕನ್ನಡಕ್ಕೆ - ಕಾಜೂರು ಸತೀಶ್

2 comments:

  1. ಮಳೆಯ ಹೃದಯದ ಕಾವು. ವಿಭಿನ್ನ ಕಲ್ಪನೆ. ಮಳೆಯೆಂದರೆ ಕಾವೇ ಇಲ್ಲದ ಕಾಲ. ಕವಿಯಿಂದ ನಮಗೆ ಮಳೆಯ ಕಾವು ತಿಳಿಯಿತು. ಮುದ್ದಣ ಮನೋರಮೆಯರಿಗೂ ಮುಂದಾಗಿ ತಿಳಿಸಿದ್ದರೆ ಅವರೂ ಖುಷಿ ಪಡುತ್ತಿದ್ದರು.

    ReplyDelete
  2. ಮಳೆಯ ಹೃದಯದ ಕಾವು.....ಆಹಾ...

    ReplyDelete